ಸವಣಾಲು: ಹಿತ್ತಿಲವೇಲ ಕೂಡುಜಾಲು ಸಮೀಪದ ನದಿಯಲ್ಲಿ ಬೈಕ್ ಸಮೇತ ಯುವಕರಿಬ್ಬರು ಕೊಚ್ಚಿ ಹೋಗಿರುವ ಘಟನೆ ಭಾನುವಾರ ನಡೆದಿದ್ದು, ಬೈಕ್ ಸವಾರರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಸವಣಾಲು ಹಿತ್ತಿಲಪೇಲ ಪ್ರದೇಶದ ಕೆಳಗಿನ ವೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹಸವಾರ ಸುಳ್ಳೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆಂದು ಬೈಕ್ ನಲ್ಲಿ ಹೊರಟು ನದಿಯನ್ನು ಬೈಕ್ ಸಮೇತ ದಾಟುವ ಸಾಹಸ ಮಾಡಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಅದೃಷ್ಟವಶಾತ್ ಬೈಕ್ ನದಿಯ ಬದಿಯಲ್ಲಿ ಸಿಲುಕಿದ್ದು, ಯುವಕರಿಬ್ಬರು ಯಾವುದೋ ಬಳ್ಳಿಯ ಸಹಾಯದಿಂದ ನದಿಯಿಂದ ಮೇಲೆ ಬಂದಿದ್ದಾರೆ. ಸ್ಥಳೀಯರ ಕಾರ್ಯಾಚರಣೆಯಲ್ಲಿ ಈಗ ಬೈಕ್ ಮೇಲಕ್ಕೆತ್ತುವ ಕಾರ್ಯ ಮಾಡಲಾಗುತ್ತಿದೆ.
























