ಇಸ್ರೇಲ್‌ ಮೇಲೆ ಇರಾನ್‌ ಪ್ರತಿಕಾರದ ದಾಳಿ : ಹೆಚ್ಚಿದ ಯುದ್ಧದ ಆತಂಕ

ಇರಾನ್‌ನ ಸೇನಾಧಿಕಾರಿಗಳು, ವಿಜ್ಞಾನಿಗಳು ಸೇರಿ 76 ಮಂದಿ ಸಾವು

ಜೆರುಸೆಲಂ: ಇರಾನ್‌ ಮೇಲೆ ಇಸ್ರೇಲ್ ಶುಕ್ರವಾರ ನಸುಕಿನ ಹೊತ್ತು ದಾಳಿ ಮಾಡಿದ ಬಳಿಕ ಮಧ್ಯಪೂರ್ವದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ದಾಳಿಗೆ ಪ್ರತಿಕಾರವಾಗಿ ಇಂದು ನಸುಕಿನ ಹೊತ್ತು ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿಗಳ ಮಳೆಗರೆದಿದ್ದು, ಇದರ ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ಇರಾನ್‌ ಪ್ರತಿಕಾರದ ಪಣತೊಟ್ಟಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ಜಗತ್ತಿನಾದ್ಯಂತ ಇರುವ ತನ್ನ ದೂತವಾಸಗಳನ್ನು ಹಾಗೂ ಇತರ ರಾಜತಾಂತ್ರಿಕ ಸಂಸ್ಥಾಪನೆಗಳನ್ನು ಮುಚ್ಚಿದೆ. ಜಗತ್ತಿನೆಲ್ಲೆಡೆ ಇರುವ ಯೆಹೂದಿಗಳಿಗೆ ಯೆಹೂದಿ ಎಂದು ಗುರುತು ಬಹಿರಂಗಪಡಿಸುವ ಯಾವುದೇ ಉಡುಪು, ಚಿಹ್ನೆಗಳನ್ನು ಸಾರ್ವಜನಿಕವಾಗಿ ಧರಿಸದಂತೆ ಮುನ್ನೆಚ್ಚರಿಕೆ ನೀಡಿದೆ.



















































 
 

ಇರಾನ್‌ನ ಕ್ಷಿಪಣಿಗಳು ಶನಿವಾರ ನಸುಕಿನ ಹೊತ್ತು ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ಮೇಲೆ ಎರಗಿವೆ. ಜೆರಸಲೇಮ್‌ನಲ್ಲೂ ಭಾರಿ ಸ್ಫೋಟದ ಸದ್ದು ಕೇಳಿಸಿದೆ. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಬಹುತೇಕ ಕ್ಷಿಪಣಿಗಳನ್ನು ತಡೆದು ಹೊಡೆದುರುಳಿದೆ. ಇರಾನ್‌ ʼಆಪರೇಷನ್‌ ಟ್ರೂ ಪ್ರಾಮಿಸ್‌ʼ ಹೆಸರಿನಲ್ಲಿ ಪ್ರತಿಕಾರದ ಕಾರ್ಯಾಚರಣೆ ಪ್ರಾರಂಭಿಸಿದೆ. ಇಸ್ರೇಲ್‌ ತನ್ನ ಪ್ರಜೆಗಳಿಗೆ ಸುರಕ್ಷಿತ ನೆಲೆಗಳಲ್ಲಿ ಆಶ್ರಯ ಪಡೆದುಕೊಳ್ಳಲು ಸೂಚಿಸಿದ್ದು, ಎರಡು ಬದ್ಧವೈರಿ ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ನಡುವೆ ಇರಾನ್‌ ಮೇಲಿನ ದಾಳಿಯನ್ನು ಇಸ್ರೇಲ್‌ ಶನಿವಾರವೂ ಮುಂದುವರಿಸಿದೆ. ಇಸ್ರೇಲ್‌ ದಾಳಿಯಲ್ಲಿ ಇರಾನ್‌ನ ಸೇನಾಧಿಕಾರಿಗಳು, ವಿಜ್ಞಾನಿಗಳು ಮತ್ತು ನಾಗರಿಕರು ಸೇರಿ 78 ಮಂದಿ ಸತ್ತಿದ್ದಾರೆ. ಇರಾನ್‌ನ ಪರಮಾಣು ಅಸ್ತ್ರ ನೆಲೆಗಳನ್ನು ಗುರಿ ಮಾಡಿಕೊಂಡು ಇಸ್ರೇಲ್‌ ದಾಳಿ ಮಾಡಿದೆ. ದಾಳಿಯಲ್ಲಿ ಹಲವಾರು ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳು ಹುತಾತ್ಮರಾಗಿದ್ದಾರೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲ ಖಮೇನಿ ಶುಕ್ರವಾರ ದೃಢಪಡಿಸಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ ಸೇರಿದಂತೆ 6 ಪರಮಾಣು ವಿಜ್ಞಾನಿಗಳು ಸಹ ಸೇರಿದ್ದಾರೆ. ಜನರಲ್ ಅಮೀರ್ ಅಲಿ ಹಾಜಿಜಾದೆ ಹತ್ಯೆಯಾಗಿರುವುದನ್ನು ಇರಾನ್ ದೃಢಪಡಿಸಿದೆ. ಇವರ ಜೊತೆಗೆ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಅಥವಾ ಐಆರ್‌ಜಿಸಿಯ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಹೊಸೇನ್ ಸಲಾಮಿ, ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿಸಿದೆ. ಇರಾನ್‌ನ ಉನ್ನತ ಮಿಲಿಟರಿ ಅಧಿಕಾರಿ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ ಸಾವನ್ನಪ್ಪಿದರು. ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದ ಆರು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ದೃಢಪಡಿಸಿವೆ, ಅವರಲ್ಲಿ ನಾಲ್ವರನ್ನು ಫೆರೆಡೌನ್ ಅಬ್ಬಾಸಿ-ದವಾನಿ, ಮೊಹಮ್ಮದ್ ಮೆಹದಿ ಟೆಹ್ರಾನ್ಚ್, ಅಹ್ಮದ್ ರೆಜಾ ಜೊಲ್ಫಾಘರಿ ಮತ್ತು ಅಮಿರ್‌ಹೊಸೇನ್ ಫೆಖಿ ಎಂದು ಗುರುತಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top