ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ
ನವದೆಹಲಿ : ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಇನ್ನೂ ದೇಶ ಮಮ್ಮಲ ಮರುಗುತ್ತಾ ಇರುವಾಗಲೇ ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಥಾಯ್ಲೆಂಡ್‌ನಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದ್ದು, ಈ ಕಾರಣದಿಂದ ತಕ್ಷಣ ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದೆ ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಹೇಳಿದ್ದಾರೆ.
ಇದೀಗ ವಿಮಾನ AI 379 ಲ್ಯಾಂಡ್ ಆಗಿದ್ದು, ಹಾರಾಟ ಮಾಡುತ್ತಿದ್ದ ವೇಳೆ ಈ ಬೆದರಿಕೆ ಬಂದಿದೆ. ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇದೀಗ ಈ ವಿಚಾರ ಸಾರ್ವಜನಿಕರಲ್ಲಿ ಹಾಗೂ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.
ಬಾಂಬ್ ಬೆದರಿಕೆಯ ನಂತರ ಏರ್ ಇಂಡಿಯಾ ವಿಮಾನ ಸಿಬ್ಬಂದಿ ವಿಮಾನ AI 379ನಿಂದ ಪ್ರಯಾಣಿಕರನ್ನು ಹೊರಕ್ಕೆ ಕರದುಕೊಂಡು ಬಂದಿದ್ದಾರೆ ಎಂದು ಥಾಯ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಪ್ರಾಥಮಿಕ ಶೋಧದ ನಂತರ ಸಂಬಂಧಪಟ್ಟ ಏರ್ ಇಂಡಿಯಾ ವಿಮಾನದೊಳಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ವಿಮಾನದಲ್ಲಿ 156 ಪ್ರಯಾಣಿಕರಿದ್ದರು. ಈ ವೇಳೆ ಯಾರು ಭಯಪಡಬೇಡಿ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಪ್ರಯಾಣಿಕರಿಗೂ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ 9:30ಕ್ಕೆ (0230) ಫುಕೆಟ್ ವಿಮಾನ ನಿಲ್ದಾಣದಿಂದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ್ಟಿತ್ತು. ಅಂಡಮಾನ್ ಸಮುದ್ರದ ಸುತ್ತಲೂ ವಿಶಾಲವಾದ ಲೂಪ್ ಮಾಡಿ ಥಾಯ್ ದ್ವೀಪದಲ್ಲಿ ಮತ್ತೆ ಇಳಿಯಿತು ಎಂದು ಫ್ಲೈಟ್ ಟ್ರ್ಯಾಕರ್ ಫ್ಲೈಟ್‌ರಾಡರ್ 24 ತಿಳಿಸಿದೆ. ಬಾಂಬ್ ಬೆದರಿಕೆಯ ಕುರಿತು AOT ಯಾವುದೇ ವಿವರಗಳನ್ನು ನೀಡಿಲ್ಲ ಎಂದು ಹೇಳಿದೆ.