ಇನ್ಫೋಸಿಸ್ ಸಂಸ್ಥೆಯ ಪ್ರೇರಣಾ ಟ್ರಸ್ಟ್ ನಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಐದು ಯಂತ್ರಗಳ ಕೊಡುಗೆ

ಪುತ್ತೂರು: ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳ ಮಹತ್ವವನ್ನು ಅರಿತ ಇನ್ಫೋಸಿಸ್ ಸಂಸ್ಥೆಯ ಪ್ರೇರಣಾ ಟ್ರಸ್ಟ್, ತನ್ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ  ಐದು ಪ್ರಮುಖ ವೈದ್ಯಕೀಯ ಉಪಕರಣಗಳನ್ನು ದಾನವಾಗಿ ನೀಡಿದೆ.

ಅನೇಸ್ಥೀಷಿಯಾ ವರ್ಕ್‌ಸ್ಟೇಷನ್, ಅಲ್ಟ್ರಾಸೌಂಡ್ ಯಂತ್ರ, ಸಿ-ಆರ್ಮ್ ಯಂತ್ರ, ಇ.ಟಿ.ಒ ಸ್ಟೆರಿಲೈಸರ್ ಯಂತ್ರ ಹಾಗೂ ಸ್ಲಿಟ್ ಲ್ಯಾಂಪ್ ಯಂತ್ರವನ್ನು ಕೊಡುಗೆಯಾಗಿ ನೀಡಿದೆ.

ಈ ಉಪಕರಣಗಳು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗ, ಸ್ಕ್ಯಾನಿಂಗ್ ವಿಭಾಗ,ಕಣ್ಣು ತಪಾಸಣಾ ವಿಭಾಗ, ತುರ್ತು ಚಿಕಿತ್ಸಾ ಸೇವೆ ಮತ್ತು ಸೋಂಕು ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ. ಇದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲಿದೆ.



















































 
 

ಇತ್ತೀಚೆಗಷ್ಟೇ ಇನ್ಫೋಸಿಸ್ ಪ್ರೇರಣಾ ಟ್ರಸ್ಟ್ ತಂಡದ ಸದಸ್ಯರಾದ ವಾಸುದೇವ ಕಾಮತ್, ರವಿರಾಜ್ ಬಲ್ಮಾ, ಸಂದೀಪ್ ಮತ್ತು ಆ್ಯರನ್ ಡಿ’ಸಿಲ್ವಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಕೊಡುಗೆಯಾಗಿ ನೀಡಿದ ಉಪಕರಣಗಳ ಅಳವಡಿಕೆ ಹಾಗೂ ಕಾರ್ಯನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ  ಡಾ. ದೀಪಿಕಾ ವಾಗ್ಲೆ, ಇನ್ಫೋಸಿಸ್ ನ ಪ್ರಮೋದ್ ಮತ್ತು ಅಪರ್ಣಾ ಭಟ್ ಉಪಸ್ಥಿತರಿದ್ದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಕೆ. ಇನ್ಫೋಸಿಸ್ ಪ್ರೇರಣಾ ಟ್ರಸ್ಟ್ ನೀಡಿರುವ ಈ ಉಪಕರಣಗಳು ಆಸ್ಪತ್ರೆಯ ವೈದ್ಯಕೀಯ ಸೌಲಭ್ಯವನ್ನು ಬಲಪಡಿಸುತ್ತವೆ. ಇವು ನಮ್ಮ ಆರೋಗ್ಯ ಸೇವೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸಿ, ಜನತೆಗೆ ಉತ್ತಮ ಚಿಕಿತ್ಸೆ ನೀಡಲು ನೆರವಾಗಲಿದೆ. ಇನ್ಫೋಸಿಸ್ ನ ಪ್ರೇರಣಾ ಟ್ರಸ್ಟ್‌ಗೆ ನಾವು ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top