ಪುತ್ತೂರು: ಲಯನ್ಸ್ ಜಿಲ್ಲೆ 317.ಡಿ ಪ್ರಾಂತ್ಯ 8ರ ವಲಯ 2ರ ಅಧ್ಯಕ್ಷರಾಗಿ ಚಂದ್ರಶೇಖರ ರೈ ನಂಜೆ ಅವರನ್ನು ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ ಶೆಣೈ ಅವರು ನಿಯುಕ್ತಿಗೊಳಿಸಿದ್ದಾರೆ.
ಸುಳ್ಯ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರು, ಸುಳ್ಯ ಪಯಸ್ಸಿನಿ ಸೀನಿಯರ್ ಛೇಂಬರ್‌ನ ನಿಕಟ ಪೂರ್ವ ಅಧ್ಯಕ್ಷರು, ಸುಳ್ಯ ಪಯಸ್ಸಿನಿ ಜೇಸಿಸ್ ನ ಪೂರ್ವಾಧ್ಯಕ್ಷರು ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಸುಳ್ಯ ಡಿಜಿ ಪ್ಲಸ್ ಮಾಲಕರು. ಲಯನ್ಸ್ ಕ್ಲಬ್ ಸುಳ್ಯ, ಲಯನ್ಸ್ ಕ್ಲಬ್ ಸಂಪಾಜೆ ಹಾಗೂ ಲಯನ್ಸ್ ಕ್ಲಬ್ ಗುತ್ತಿಗಾರು ಇವರ ವ್ಯಾಪ್ತಿಯಲ್ಲಿ ಒಳಗೊಂಡಿರುತ್ತದೆ.
ಚಂದ್ರಶೇಖರ ರೈ ನಂಜೆ ಅವರು ಪುತ್ತೂರು ತಾಲೂಕಿನ ಕುರಿಯ ಏಳ್ನಾಡು ಗುತ್ತು ನಂಜೆ ಮನೆತನದವರು. ಪ್ರಸ್ತುತ ಬೆಳ್ಳಾರೆಯಲ್ಲಿ ವಾಸ್ತವ್ಯವಿದ್ದಾರೆ.