ಮೂರೂ ಕೊಲೆ ಪ್ರಕರಣಗಳ ಎನ್‌ಐಎ ತನಿಖೆ : ಮುಂಜುನಾಥ ಭಂಡಾರಿ ಆಗ್ರಹ

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬೇಡ ಎಂದು ಹೇಳಿಕೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿದ್ದು, ಈ ಮೂರು ಕೊಲೆ ಪ್ರಕರಣಗಳ ಎನ್‌ಐಎ ತನಿಖೆಯಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ.

ಬೆನ್ನುಬೆನ್ನಿಗೆ ನಡೆದ ಈ ಮೂರು ಕೊಲೆಗಳು ಇಡೀ ಕರಾವಳಿಯಲ್ಲಿ ಆತಂಕ ಮೂಡಿಸಿವೆ. ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಎನ್‌ಐಎ ತನಿಖೆಗೆ ವಹಿಸಿದರೆ ದುಷ್ಕೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.

















































 
 

ಕೇಂದ್ರ ಗೃಹ ಇಲಾಖೆ ಬಜಪೆ ಕಿನ್ನಿಪದವಿನಲ್ಲಿ ನಡೆದ ಸುಹಾಸ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿದೆ. ಇದೇ ಮಾದರಿಯಲ್ಲಿ ಕುಡುಪುವಿನಲ್ಲಿ ಏ.27ರಂದು ಅಶ್ರಫ್ ಎಂಬಾತನನ್ನು ಗುಂಪು ಹತ್ಯೆ ಮಾಡಲಾಗಿದೆ. ಇದಾದ ಬಳಿಕ ಬಜಪೆ ಕಿನ್ನಿಪದವಿನಲ್ಲಿ ಮೇ 1ರಂದು ಸುಹಾಸ್ ಶೆಟ್ಟಿ ಕೊಲೆ ನಡೆದರೆ, ಈ ಘಟನೆ ನಡೆದ ಕೆಲವೇ ದಿನದ ಬಳಿಕ ಮೇ 27ರಂದು ಕುರಿಯಾಳ ಕಾಂಬೋಡಿ ಬಳಿ ಅಬ್ದುಲ್ ರಹ್ಮಾನ್ ಕೊಲೆಯಾಗಿದೆ ಎಂದು ತಿಳಿಸಿದರು.
ಈ ಮೂರು ಪ್ರಕರಣಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬಳಿಯುವ ಬದಲು ಮೂರೂ ಪ್ರಕರಣಗಳು ಎನ್‌ಐಎಗೆ ವಹಿಸಲಿ ಎಂದಿದ್ದಾರೆ.

ಎನ್‌ಐಎ ತನಿಖೆ ನಡೆದರೆ ಇಡೀ ಕರಾವಳಿಯ ಕೋಮು ಸಂಘರ್ಷದ ಜಾಲ ಬಯಲಾಗುವ ಸಾಧ್ಯತೆಯಿದೆ. ನಾಗರಿಕರೂ ಇದರ ಹಿಂದಿರುವ ಸತ್ಯವನ್ನು ಅರಿಯಬಹುದಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ಮೂರೂ ಪ್ರಕರಣಗಳನ್ನು ಎನ್‌ಐಎಗೆ ವಹಿಸಲಿ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top