34.4 ಕೋಟಿಯಿಂದ 7.25 ಕೋಟಿಗಿಳಿದ ಕಡುಬಡವರ ಸಂಖ್ಯೆ

ದೇಶದಲ್ಲಿ ಕಡುಬಡವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖ ಎಂದು ವಿಶ್ವಬ್ಯಾಂಕ್‌ ವರದಿ

ನವದೆಹಲಿ: ದೇಶದಲ್ಲಿ ಕಡಡುಬಡವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಕಳೆದೊಂದು ದಶಕದಲ್ಲಿ ಕಡುಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

2011-12ರಲ್ಲಿ ಶೇ. 27.1 ಇದ್ದ ಕಡುಬಡತನ ಪ್ರಮಾಣ 2022-23ರಲ್ಲಿ ಶೇ.5.3ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ಅಂಕಿಅಂಶಗಳು ಬಹಿರಂಗಪಡಿಸಿವೆ. 2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿದ್ದರು. ಇದು 2011-12ರಲ್ಲಿ 344.47 ಮಿಲಿಯನ್‌ಗೆ ಏರಿಕೆಯಾಗಿತ್ತು.

















































 
 

ವಿಶ್ವಬ್ಯಾಂಕ್ ದತ್ತಾಂಶದ ಪ್ರಕಾರ 11 ವರ್ಷಗಳಲ್ಲಿ 269 ಮಿಲಿಯನ್ ಜನರು ತೀವ್ರಬಡತನದಿಂದ ಮುಕ್ತರಾಗಿದ್ದಾರೆ. 2011-12ರಲ್ಲಿ ಭಾರತದ ಕಡುಬಡವರು ಶೇ.65ರಷ್ಟಿದ್ದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯದವರಾಗಿದ್ದರು. 2022-23ರ ವೇಳೆಗೆ ಕಡುಬಡತನದ ಒಟ್ಟಾರೆ ಕುಸಿತದ ಮೂರನೇ ಎರಡರಷ್ಟು ಭಾಗಕ್ಕೆ ಬಂದಿದೆ.

ಕಡುಬಡತನದಲ್ಲಿರುವ ಜನರು 344.47 ಮಿಲಿಯನ್‌ನಿಂದ (34.4 ಕೋಟಿ) ಕೇವಲ 75.24 ಮಿಲಿಯನ್‌ಗೆ (7.25 ಕೋಟಿ) ಇಳಿದಿದ್ದಾರೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top