ಕಡಬ :ಕೊಯಿಲ ಕೆ. ಸಿ ಫಾರಂ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ, ವಿದ್ಯಾರ್ಥಿ ಗಳು ತಂದ ಗಿಡವನ್ನು ನೆಡುವುದರ ಮೂಲಕ, ವಿಶ್ವ ಪರಿಸರ ದಿನದ ಮಹತ್ವ ವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅರ್ಥರ್ಪೂರ್ಣ ವಾಗಿ ಆಚರಿಸಲಾಯಿತು..
ಜೊತೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದೇಶದ್ಯಾಂತ ನಡೆಯುತ್ತಿರುವ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮ ನಡೆಯಿತು..ಪ್ರತಿಯೊಬ್ಬ ವಿದ್ಯಾರ್ಥಿ ಗಳಿಗೆ ತಮ್ಮ ತಾಯಿಯೊಂದಿಗೆ ಗಿಡ ನೆಡುವ ಫೋಟೋ ಅಪ್ಲೋಡ್ ಮಾಡುವ ಬಗ್ಗೆ ಪ್ರಭಾರ ಶಿಕ್ಷಕಿ ಅನುಪಮಾ ಅವರು ಸರಿಯಾದ ಮಾಹಿತಿ ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಮತ್ತು ಶಾಲಾ ಶಿಕ್ಷಕ ವೃಂದ ಉಪಸ್ಥಿತ ರಿದ್ದರು
