ಮಹಿಳೆಯ ಹೊಟ್ಟೆಯೊಳಗಿತ್ತು 861 ಕಲ್ಲು!

ಮೈಸೂರು : ಮಹಿಳೆಯ ಹೊಟ್ಟೆಯೊಳಗಿದ್ದ 861 ಕಲ್ಲುಗಳನ್ನು ವೈದ್ಯರು ಹೊರ ತೆಗೆದಿರುವಂತಹ ಘಟನೆಯೊಂದು ನಗರದಲ್ಲಿ ನಡೆದಿದೆ. ಮೈಸೂರಿನ ಕಾವೇರಿ ಆಸ್ಪತ್ರೆಯ ವೈದ್ಯರು ಮಾಡಿದ ಅಪರೂಪದ ಶಸ್ತ್ರ ಚಿಕಿತ್ಸೆ ಇದು. ವೈದ್ಯಕೀಯ ತಪಾಸಣೆ ವೇಳೆ ಮಹಿಳೆಯ ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್​ನಲ್ಲಿ ಕಲ್ಲುಗಳು ಇರುವುದು ಪತ್ತೆ ಆಗಿದೆ. ಕೂಡಲೇ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್​​ಕೊಲೆಂಜಿಯೊ ಪ್ಯಾಂಕ್ರಿಯಾಟೋಗ್ರಫಿ ವಿಧಾನದ ಮ‌ೂಲಕ ಶಸ್ತ್ರಚಿಕಿತ್ಸೆ ಮಾಡಿ ಕಲ್ಲುಗಳನ್ನು ಹೊರ ತೆಗೆದಿದ್ದಾರೆ.

55 ವರ್ಷದ ಮಹಿಳೆಯೋರ್ವರು ಹೊಟ್ಟೆನೋವು ಮತ್ತು ಜಾಂಡೀಸ್​ನಿಂದ ಬಳಲುತ್ತಿದ್ದರು. ತಪಾಸಣೆ ಮಾಡಿದ ವೈದ್ಯರು, ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್​ನಲ್ಲಿದ್ದ ಕಲ್ಲುಗಳ ರಾಶಿಯನ್ನು ಕಂಡು ಶಾಕ್​ ಆಗಿದ್ದಾರೆ. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೊಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್​ಎಂ ಅರವಿಂದ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು,​ 861 ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top