ಕೇರಳ : ಕಂಟೈನರ್ ನಲ್ಲಿ ಕೂಡಿಹಾಕಿ ಅಕ್ರಮವಾಗಿ ಸಾಗಿಸುತ್ತಿದ್ದ 24 ದನಗಳನ್ನು ರಕ್ಷಿಸಿದ ಸಿಸಿಬಿ ಪೊಲೀಸರು ಕಂಟೈನರ್ ಲಾರಿಯನ್ನು ವಶಕ್ಕೆ ಪಡೆದುಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಚಾಲಕ ಉತ್ತರ ಪ್ರದೇಶ ಮುಜಾಫರ್ ನಗರದ ಆಸಿಫ್ (25) ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಬಂದ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್ ಐ. ಶರಣಪ್ಪ ಭಂಡಾರಿ ನೇತೃತ್ವದ ತಂಡ ಜು. 1ರ ನಸುಕಿನ ಜಾವ ತಲಪಾಡಿ ಟೋಲ್ ಗೇಟ್ ಬಳಿ ಕಾರ್ಯಾಚರಣೆ ನಡೆಸಿತ್ತು. ದನಗಳನ್ನು ಕೇರಳದಿಂದ ಕಳವುಗೈದು ಸಾಗಿಸುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.