ಸೌದಿ ಅರೇಬಿಯಾದಲ್ಲಿ ಕಾಸರಗೋಡಿನ ಚಾಲಕನ ಹತ್ಯೆ

ಟ್ಯಾಕ್ಸಿ ಸ್ವಚ್ಛಗೊಳಿಸುತ್ತಿದ್ದಾಗ ಗುಂಡಿಕ್ಕೆ ಕೊಂದ ದುಷ್ಕರ್ಮಿಗಳು

ರಿಯಾದ್: ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ಭಾನುವಾರ ನಸುಕಿನ ಜಾವ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಸೌದಿ ಅರೇಬಿಯದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ನಡೆದಿದೆ.
ಕೊಲೆಯಾದ ಟ್ಯಾಕ್ಸಿ ಚಾಲಕನನ್ನು ಕಾಸರಗೋಡು ಕುತ್ತಿಕೋಲ್ ಏಣಿಯಾಡಿಯ 42 ವರ್ಷದ ಬಷೀರ್ ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಬಷೀರ್ ಅವರು ಸೌದಿ ಅರೇಬಿಯಾದಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮೊದಲು ಹೌಸ್ ಡ್ರೈವರ್ ವೀಸಾದ ಮೇಲೆ ಸೌದಿಗೆ ಹೋಗಿದ್ದರು ಎನ್ನಲಾಗಿದೆ. ಬಿಶಾ ಪ್ರದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಷೀರ್ ತನ್ನ ನಿವಾಸದ ಬಳಿ ಟ್ಯಾಕ್ಸಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಬಿಶಾದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರಸ್ತೆಯಲ್ಲಿ ಭಾನುವಾರ ನಸುಕಿನ ಹೊತ್ತು ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top