ಮಟ್ಕಾ, ಜುಗಾರಿ : ಬುಕ್ಕಿ ಸಹಿತ ಇಬ್ಬರ ಬಂಧನ

ಉಡುಪಿ : ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಬುಕ್ಕಿ ಸಹಿತ ಇಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿಠಲ ದೇವಾಡಿಗ ಹಾಗೂ ಜೂಜಾಟದ ಬುಕ್ಕಿ ಉಡುಪಿ ಲಿಯೋ ಕರ್ನೇಲಿಯೋ ಬಂಧಿತರು. ಆರೋಪಿಗಳಿಬ್ಬರನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ.

ಶನಿವಾರ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವಥಕಟ್ಟೆ ಬಸ್‌ ನಿಲ್ದಾಣದ ಬಳಿ ವಿಠಲ ದೇವಾಡಿಗ ಎಂಬಾತ ಮಟ್ಕಾ ಚೀಟಿ ಬರೆಯುತ್ತಿದ್ದ. ಆತನನ್ನು  ಬಂಧಿಸಿದ್ದು, ಆತನ ವಶದಲ್ಲಿ ಮಟ್ಕಾ ಸಂಖ್ಯೆ ಬರೆದಿರುವ  ಚೀಟಿ – 1,  1,200 ನಗದು ರೂ. ಮತ್ತು ಬಾಲ್ ಪೆನ್ -1ನ್ನು ಜಪ್ತಿ ಮಾಡಲಾಗಿತ್ತು.





















































 
 

ವಿಠಲ ದೇವಾಡಿಗ ಮತ್ತು ಲಿಯೋ  ಕರ್ನೇಲಿಯೋ ಇಬ್ಬರು ಸಂಘಟಿತರಾಗಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿದ್ದರು. ಇಬ್ಬರ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top