ಪುತ್ತೂರು : ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಮುಂದುವರಿದ ಮಳೆಯ ಆರ್ಭಟಕ್ಕೆ ಮನೆಯೊಂದರ ತಡೆಗೋಡೆ ಕುಸಿತವಾಗಿದ್ದು, ಪುತ್ತೂರಿನ ರಕ್ತೇಶ್ವರಿ ವಠಾರದ ಲಿಂಗದಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ.
ಈ ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಬಹಳ ದೊಡ್ಡ ದುರಂತ ತಪ್ಪಿದೆ. ಶಶಿಕಾಂತ್ ರಾವ್ ಎಂಬವರಿಗೆ ಸೇರಿದ ತಡೆಗೋಡೆ ಇದಾಗಿದ್ದು, ಇನ್ನೂ ಮೂರು ಮನೆಗಳು ಅಪಾಯದ ಸ್ಥಿತಿಯಲ್ಲಿದೆ ಎನ್ನಲಾಗಿದೆ.
ತಡೆಗೋಡೆ ಕುಸಿತ ಪ್ರದೇಶಕ್ಕೆ ನಗರಸಭೆಯ ಸದಸ್ಯ ದಿನೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.