ಲಷ್ಕರ್‌ನ ಇಬ್ಬರು ಹೈಬ್ರಿಡ್‌ ಉಗ್ರರ ಬಂಧನ

ಬಂದೂಕು ಸಹಿತ ಅಪಾರ ಶಸ್ತ್ರಾಸ್ತ್ರ ವಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಭದ್ರತಾ ಪಡೆ ಲಷ್ಕರ್‌ ಇ ತೈಬಾದ ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಶೋಪಿಯಾನ್‌ನಲ್ಲಿ ಬಂಧಿಸಲಾದ ಈ ಲಷ್ಕರ್ ಭಯೋತ್ಪಾದಕರನ್ನು ಇರ್ಫಾನ್ ಬಶೀರ್ ಮತ್ತು ಉಜೈರ್ ಸಲಾಮ್ ಎಂದು ಗುರುತಿಸಲಾಗಿದೆ. ಭಾರಿ ದೊಡ್ಡ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದಿಂದ ಅವರು ಓಡಾಡುತ್ತಿದ್ದರು ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಸೆರೆಯಾದ ಉಗ್ರರ ಬಳಿ 2 ಎಕೆ-56 ಬಂದೂಕು, 4 ಮ್ಯಾಗಜೀನ್‌ಗಳು, 102 ಲೈವ್ ಕಾರ್ಟ್ರಿಡ್ಜ್‌ಗಳು, 2 ಹ್ಯಾಂಡ್ ಗ್ರೆನೇಡ್‌ಗಳು, ನಗದು, ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಆಧಾರ್ ಕಾರ್ಡ್‌ಗಳು ಇದ್ದವು.





















































 
 

ಶೋಪಿಯಾನ್ ಬಸ್ಕುಚನ್‌ನ ತೋಟವೊಂದರಲ್ಲಿ ಈ ಭಯೋತ್ಪಾದಕರು ಅಡಗಿಕೊಂಡಿದ್ದರು. ತೋಟದಲ್ಲಿ ಅವರ ಚಲನವಲನ ಕಂಡುಬಂದು ಭದ್ರತಾ ಪಡೆ ಅವರನ್ನು ಸುತ್ತುವರಿದಾಗ ಇಬ್ಬರು ಭಯೋತ್ಪಾದಕರು ಶರಣಾದರು. ಇದರಿಂದಾಗಿ ಸಂಭವನೀಯ ಎನ್ಕೌಂಟರ್ ತಪ್ಪಿತು.

ಹೈಬ್ರಿಡ್​ ಉಗ್ರರೆಂದರೆ ಸದಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದಿಲ್ಲ. ಸಾಮಾನ್ಯ ಜನರಂತೆ ಜೀವನ ನಡೆಸುತ್ತಿರುತ್ತಾರೆ. ತಮ್ಮ ಸಂಘಟನೆಗಳು ಕರೆದಾಗ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ತಮ್ಮ ಮಾಮೂಲು ಜೀವನಕ್ಕೆ ಮರಳುತ್ತಾರೆ. ಅವರು ಶಸ್ತ್ರಾಸ್ತ್ರಗಳನ್ನು ಹಿಡಿದು ನೇರವಾಗಿ ದಾಳಿ ಮಾಡುವ ಜೊತೆಗೆ ಬೇರೆ ಬೇರೆ ತಂತ್ರಗಳನ್ನು ಕೂಡ ಬಳಸುತ್ತಾರೆ. ಇವರನ್ನು ಗುರುತಿಸುವುದು ತುಂಬಾ ಕಷ್ಟ. ಅವರು ಅಡಗಿಕೊಂಡಿರುವುದಿಲ್ಲ, ಕಚೇರಿ, ವಿದ್ಯಾರ್ಥಿಯಾಗಿ, ವ್ಯಾಪಾರಿಯಾಗಿ ಸಾಮಾನ್ಯರಂತೆಯೇ ಜೀವನ ಸಾಗಿಸುತ್ತಿರುತ್ತಾರೆ. ದಾಳಿ ನಡೆಸುವ ವೇಳೆ ಮಾತ್ರ ಅವರ ಉಗ್ರ ರೂಪ ಗೋಚರಿಸುತ್ತದೆ. ಡಾರ್ಕ್ ವೆಬ್, ಎನ್‌ಕ್ರಿಪ್ಟೆಡ್ ಮೆಸೆಜಿಂಗ್ ಆ್ಯಪ್‌ಗಳು, ಡ್ರೋನ್‌ಗಳು ಮತ್ತು ಇಂಟರ್‌ನೆಟ್ ಪ್ರಚಾರದ ಮೂಲಕ ಉಗ್ರ ಚಟುವಟಿಕೆ ನಡೆಸುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top