ಹಮಾಸ್‌ ಮುಖ್ಯಸ್ಥ ಮುಹಮ್ಮದ್‌ ಸಿನ್ವಾರ್‌ ಇಸ್ರೇಲ್‌ ದಾಳಿಗೆ ಬಲಿ

ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಅಡಗಿಕೊಂಡಿದ್ದ ಉಗ್ರನನ್ನು ಹುಡುಕಿ ಕೊಂದ ಇಸ್ರೇಲ್‌ ಪಡೆ

ಟೆಲ್‌ ಅವೀವ್‌: ಇಸ್ರೇಲ್ ವಾಯುದಾಳಿಯಲ್ಲಿ ಹಮಾಸ್‌ನ ಉಗ್ರಗಾಮಿ ಪಡೆಯ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಸತ್ತಿರುವುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಮಿಲಿಟರಿಯಿಂದ ಕೊಲ್ಲಲ್ಪಟ್ಟ ಗಾಜಾದ ಮಾಜಿ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ನ ಕಿರಿಯ ಸಹೋದರ ಮುಹಮ್ಮದ್ ಸಿನ್ವಾರ್. ಈತನನ್ನು ಸಾಯಿಸುವ ಮೂಲಕ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ ನಿರ್ಣಾಯಕ ಗೆಲುವು ಪಡೆದುಕೊಂಡಿದೆ.

ಗಾಜಾದ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಅಡಗಿಕೊಂಡಿದ್ದ ಮುಹಮ್ಮದ್‌ ಸಿನ್ವಾರ್‌ ಇಸ್ರೇಲ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸತ್ತಿದ್ದಾನೆ. ಅವನ ಜೊತೆಗೆ ಇನ್ನೂ ಕೆಲವು ಹಮಾಸ್‌ ಮುಖ್ಯಸ್ಥರು ಸತ್ತಿದ್ದಾರೆ ಎಂದು ವರದಿಯಾಗಿದೆ.



















































 
 

ಇತ್ತೀಚಿನ ಇಸ್ರೇಲಿ ಕಾರ್ಯಾಚರಣೆಗಳಲ್ಲಿ ಹಮಾಸ್‌ನ ಹಲವಾರು ನಾಯಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೊಹಮ್ಮದ್ ಸಿನ್ವಾರ್ ಹೆಸರು ಕೂಡ ಇದೆ. ಈತ ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸೂತ್ರಧಾರಿ ಎಂದು ನಂಬಲಾದ ಹಮಾಸ್‌ನ ಉನ್ನತ ಕಮಾಂಡರ್ ಯಾಹ್ಯಾ ಸಿನ್ವಾರ್‌ನ ಸಹೋದರ. ಕಳೆದ ವರ್ಷ ಇಸ್ರೇಲ್ ಪಡೆಗಳಿಂದ ಯಾಹ್ಯಾ ಹತ್ಯೆಗೀಡಾಗಿದ್ದಾನೆ. ಹಮಾಸ್‌ನ ಉನ್ನತ ಕಮಾಂಡರ್ ಮತ್ತು ಹತ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನ ಕಿರಿಯ ಸಹೋದರ ಮುಹಮ್ಮದ್ ಸಿನ್ವಾರ್‌ನನ್ನು ಕೊಲ್ಲಲಾಗಿದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಯಾಹ್ಯಾ ಸಿನ್ವಾರ್ ಸತ್ತ ಬಳಿಕ ಮುಹಮ್ಮದ್‌ ಸಿನ್ವಾರ್‌ ಹಮಾಸ್‌ ಉಗ್ರ ಪಡೆಯ ಮುಖ್ಯಸ್ಥನಾಗಿದ್ದ. ಯಾಹ್ಯಾ ಸಿನ್ನಾರ್‌ ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಗಾಜಾದಲ್ಲಿ ಇಸ್ರೇಲ್‌ ದಾಳಿಗೆ ಬಲಿಯಾಗಿದ್ದ. ಈ ತಿಂಗಳ ಆರಂಭದಲ್ಲಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಗಾಜಾದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಮುಹಮ್ಮದ್ ಸಿನ್ವಾರ್ ಕೊಲ್ಲಲ್ಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು.

1975ರಲ್ಲಿ ಖಾನ್ ಯೂನಿಸ್‌ನಲ್ಲಿ ಜನಿಸಿದ ಮುಹಮ್ಮದ್ ಸಿನ್ವಾರ್, ತನ್ನ ಸಹೋದರನ ಹೆಜ್ಜೆಗಳನ್ನು ಅನುಸರಿಸಿ 1980ರ ದಶಕದ ಉತ್ತರಾರ್ಧದಲ್ಲಿ ಹಮಾಸ್ ಸೇರಿದ್ದ. ಶಂಕಿತ ಉಗ್ರಗಾಮಿ ಚಟುವಟಿಕೆಗಾಗಿ 1991ರಲ್ಲಿ ಅವನನ್ನು ಇಸ್ರೇಲ್‌ ಪಡೆ ಬಂಧಿಸಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top