ಕಡಬ: ಕಾರು ಮತ್ತು ಮಿನಿ ಟೆಂಪೋ ನಡುವೆ ಅಪಘಾತವಾದ ಘಟನೆ ಕುದ್ಮಾರು ಆಲಂಕಾರು ರಸ್ತೆಯ ಶಾಂತಿಮೊಗರಿನಲ್ಲಿ ನಡೆದಿದೆ.
ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಹಾಗೂ ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಉತ್ಪನ್ನಗಳ ಲೈನ್ ಸೇಲ್ನ ಮಿನಿ ಟೆಂಪೋ ನಡುವೆ ಅಪಘಾತ ಉಂಟಾಗಿದೆ.
ಅಪಘಾತದ ರಭಸಕ್ಕೆ ಟೆಂಪೋ ಪಲ್ಟಿಯಾಗಿದ್ದು, ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.