ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು ಎಂಟ್ರಿ ಪಡೆದುಕೊಂಡಿದ್ದು, ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನರ್ ಅಗರ್’ವಾಲ್ ವರ್ಗಾವಣೆಗೊಂಡಿದ್ದಾರೆ.
2017ರಲ್ಲಿ ದ .ಕ ಎಸ್ಪಿಯಾಗಿ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನರ್ ಆಗಿ ಬರುತ್ತಿದ್ದಾರೆ. ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದ. ಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಸುಧೀರ್ ಕುಮಾರ್ ರೆಡ್ಡಿ. ದ.ಕ ಎಸ್ಪಿಯಾಗಿದ್ದ ಸಂದರ್ಭ ಅವರ ಕಾರ್ಯವೈಖರಿಯೇ ಇದಕ್ಕೆ ಕಾರಣ. ಹಲವು ಕಾರ್ಯಾಚರಣೆಗಳ ಮೂಲಕ ಮನೆಮಾತಾಗಿದ್ದರು.
ದ.ಕ.ದಿಂದ ಬೆಳಗಾವಿಗೆ ಎಸ್ಪಿಯಾಗಿ ತೆರಳಿದ ಅವರು, ನಂತರ ಆಂಧ್ರಕ್ಕೆ ವರ್ಗಾವಣೆ ಆಗಿದ್ದರು. ನಂತರ ರಾಜ್ಯದ ಗುಪ್ತಚರ ವಿಭಾಗದ ಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ದ.ಕ.ಕ್ಕೆ ಕಮೀಷನರ್ ಆಗಿ ಬರುತ್ತಿದ್ದಾರೆ.