ಮೂಡುಬಿದಿರೆ : ಮರಕಡ ಬಳಿ ಇಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬಡಗ ಮಿಜಾರಿನ ನಮೀಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರಿಯಕರನಾದ ಚಾಲಕ ವೃತ್ತಿಯ ನಿನ್ನೋಡಿಯ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ.
ವಿವಾಹಿತೆ ನಮೀಕ್ಷಾ ಎಂಬವರಿಗೆ ಇಬ್ಬರು ಗಂಡುಮಕ್ಕಳ ಇದ್ದು, ಗಂಡ ಸತೀಶ್ ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ. ನಮೀಕ್ಷಾನ ಪ್ರಿಯಕ ಪ್ರಶಾಂತ್ ಮೂಲತಃ ಬಾಗಲಕೋಟೆಯ ನಿವಾಸಿ. ಆತನಿಗೂ ಮದುವೆಯಾಗಿದೆ ಎಂದು ತಿಳಿದು ಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಇವರಿಬ್ಬರ ಪರಿಚಯವಾಗಿ ಅದು ಪ್ರೇಮಸಂಬಂಧಕ್ಕೆ ತಿರುಗಿದೆ. ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಪ್ರಾರಂಭಗೊಂಡಿದೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹಗಳನ್ನು ಅಗ್ನಿಶಾಮಕ ಸಿಬಂದಿ ಮೇಲೆತ್ತಿದ್ದಾರೆ.
ನಮೀಕ್ಷಾಳ ತಂದೆ ಹಾಗೂ ಪ್ರಶಾಂತ್ ಸಹೋದರ ಪ್ರತ್ಯೇಕವಾಗಿ ನೀಡಿರುವ ದೂರುಗಳ ಮೇರೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ.