ಪುತ್ತೂರು : ಬಂಟ್ವಾಳದಲ್ಲಿ ನಡೆದ ಕೊಲೆಯನ್ನು ನೋಡಿದರೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ದ.ಕ.ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಎದ್ದುಕಾಣುತ್ತಿದೆ. ಪೊಲೀಸರನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದ ಸರಕಾರ ರಾಜೀನಾಮೆ ನೀಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಎಂದು ದ. ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕೊಲೆಯಾದ ರೌಡಿ ಶೀಟರ್ ಸಂತಾಪ ಸಭೆಗಳಲ್ಲಿ ಪ್ರತೀಕಾರದ ಮಾತನ್ನು ಹಿಂದುತ್ವವಾದಿಗಳು ಹೇಳುತ್ತಿದ್ದರು. ಇಲಾಖೆ ಇಂತವರ ಮೇಲೆ ಅಗತ್ಯ ಕಾನೂನು ಕ್ರಮಕೈಗೊಳ್ಳುವ, ಬಂಧನ ಮಾಡುವ ಕೆಲಸವನ್ನು ಮಾಡಿಲ್ಲ. ಅನುಮತಿಯಿಲ್ಲದೆ ಬಜ್ಪೆಯಲ್ಲಿ ಕಾರ್ಯಕ್ರಮ ನಡೆಸಿ ಯುವಕರನ್ನು ಕೆರಳಿಸುವ ಕಾರ್ಯ ಮಾಡಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆ, ಸರ್ಕಾರ ಇದೆಯ ಇಲ್ಲವಾ ಎಂಬ ಅನುಮಾನ ಮೂಡಿಸುವಂತೆ ಮಾಡಿದೆ. ನಾಲಾಯಕ್ ಗೃಹಸಚಿವರಿಗೆ ಪೊಲೀಸ್ ಇಲಾಖೆಯನ್ನು ನಿಯಂತ್ರಣ ಮಾಡುವ ಸಾಮರ್ಥ್ಯವೂ ಇಲ್ಲದಾಗಿದೆ. ಅತಿಥಿ ಉಸ್ತುವಾರಿ ಸಚಿವರಿಗೆ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬ ಮಾಹಿತಿಯಿಲ್ಲದಾಗಿದೆ ಎಂದು ತಿಳಿಸಿದರು.
ನಿರಪರಾಧಿ ಅಲ್ಪ ಸಂಖ್ಯಾರ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ. ಇಲಾಖೆಗಳು ಘಟನೆಯ ಬಳಿಕ ನಾಟಕ ಮಾಡುತ್ತಿದೆ. ತಮಿಳುನಾಡಿನಿಂದ ಆಗಮಿಸಿದ ರೌಡಿ ಶೀಟರ್ ಹಾರಾಡುವುದಾದರೆ, ಅವರನ್ನು ಚಡ್ಡಿಯಲ್ಲಿ ಊರಿಗೆ ಓಡಿಸುವ ಕೆಲಸ ಇಲ್ಲಿನವರಿಂದ ನಡೆಯಬೇಕಾಗಿದೆ. ಡೋಂಗಿ ಹಿಂದುತ್ವವಾದಿಗಳನ್ನು ಜಿಲ್ಲೆಯಿಂದ ಓಡಿಸುವ ಕೆಲಸ, ಜಿಲ್ಲೆಯ ಹಿಂದುಗಳಿಂದ ನಡೆಯಬೇಕಾಗಿದೆ. ಶಾಂತಿ ಸೌಹಾರ್ಧತೆಯಿಂದ ಬದುಕು ನಡೆಸಲು ಎಲ್ಲರು ಒಗ್ಗಟ್ಟನ್ನು ಪ್ರದರ್ಶಿಸುವ ಅಗತ್ಯವಿದೆ. ಗಲಭೆಗಳಿಂದ ಉದ್ಯೋಗ ಮರೀಚಿಕೆಯಾಗಿದ್ದು, ಶಿಕ್ಷಣ ಕ್ಷೇತ್ರಕ್ಕೂ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.
ಪತ್ರಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಶೀರ್ ಪರ್ಲಡ್ಕ, ಮೋನು ಬಪ್ಪಳಿಗೆ ಉಪಸ್ಥಿತರಿದ್ದರು.
4neict