ವಾಡಿಕೆಗಿಂತ ಭಿನ್ನವಾಗಿ ಅವಧಿಪೂರ್ವ ಪ್ರವೇಶಗೈದ ನೈರುತ್ಯ ಮುಂಗಾರು

ಪುತ್ತೂರು: ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರ್ನಾಟಕ ಪ್ರವೇಶಿಸುತ್ತಿದ್ದ ನೈರುತ್ಯ ಮುಂಗಾರು ಈ ಬಾರಿ ಸುಮಾರು 10 ದಿನಗಳ ಮುಂಚಿತವಾಗಿಯೇ ಆಗಮಿಸಿದೆ. ಇದು ಕಳೆದ 16 ವರ್ಷಗಳ ಬಳಿಕ ಸಂಭವಿಸಿದ ವಿದ್ಯಮಾನವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD-India Meteorological Department) ಇದರ ನಿರ್ದೇಶಕರಾದ ಸಿ. ಎಸ್. ಪಾಟೀಲ್ ಅವರು ಹೇಳುವಂತೆ ಈ ಬಾರಿ ಕೇರಳ ಮತ್ತು ಕರ್ನಾಟಕಕ್ಕೆ ಒಂದೇ ಬಾರಿ ಮುಂಗಾರು ಪ್ರವೇಶಿಸಿದೆ.

ಮುಂಗಾರು ಮಾರುತದ ಹಾದಿ

ಈ ಮುಂಗಾರು ಮಳೆ ಮಾರುತವು ಕರ್ನಾಟಕದ ಕಾರವಾರ ಮತ್ತು ಶಿವಮೊಗ್ಗ, ತಮಿಳುನಾಡಿನ ಧರ್ಮಪುರಿ ಮತ್ತು ಚೆನ್ನೈ ಹಾಗೂ ಮಿಜೋರಾಂನ ಸೈಹಾ ಪ್ರದೇಶಗಳನ್ನು ಹಾಯುತ್ತದೆ.



















































 
 

ಎಲ್ಲೆಲ್ಲಿ ಸಾಧಾರಣ ಮಳೆ?

ಇಲಾಖೆಯ ಮಾಹಿತಿಯ ಪ್ರಕಾರ ದಕ್ಷಿಣ ಒಳನಾಡಿನ ಬೆಂಗಳೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ಬಳ್ಳಾರಿ, ಕೋಲಾರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಮಂಡ್ಯ ಪ್ರದೇಶಗಳ ಸಾಮಾನ್ಯ ಮಳೆಯಾಗಲಿದೆ.

ಎಲ್ಲೆಲ್ಲಿ ಹೆಚ್ಚು ಮಳೆ?

ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ, ಗದಗ್, ಕಲಬುರ್ಗಿ, ಬೀದರ್, ಕೊಪ್ಪಳ, ವಿಜಯಪುರ, ಹಾವೇರಿ, ಯಾದಗಿರಿ, ರಾಯಚೂರು ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲಿದೆ.

ಮುಂದಿನ ಒಂದು ವಾರ ಮಳೆ-ಗಾಳಿ

ವರದಿಯ ಪ್ರಕಾರ ಕರ್ನಾಟಕದ ಹಲವೆಡೆಗಳಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆಯ ಜೊತೆಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸಲಿದೆ.

ಕರ್ನಾಟಕದಲ್ಲಿ ಮುಂಗಾರು ಪ್ರವೇಶದ ದಿನಾಂಕಗಳ ವೈಪರೀತ್ಯ 2024ರಲ್ಲಿ ಮೇ 31ರಂದು ಬಂದಿದ್ದ ಮುಂಗಾರು, 2023ರಲ್ಲಿ ಜೂನ್ 8ರಂದು ಬಂದಿತ್ತು. 2022ರಲ್ಲಿ ತುಂಬಾ ತಡವಾಗಿ ಜೂನ್ 29ರಂದು ಬಂದಿದ್ದಾರೆ 2021ರಲ್ಲಿ ಜೂನ್ 3ಕ್ಕೆ ಆಗಮಿಸಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top