ನಡುರಸ್ತೆಯಲ್ಲೇ ಮಾಡಬಾರದ್ದನ್ನೆಲ್ಲ ಮಾಡಿದ್ದ ಲಜ್ಜೆಗೇಡಿ
ಭೋಪಾಲ: ಹೆದ್ದಾರಿ ಮಧ್ಯೆಯೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಬಂದು ಮಹಿಳೆ ಜೊತೆ ರಾಸಲೀಲೆ ನಡೆಸುತ್ತಿರುವ ಧಕಡ್‌ನ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಧಕಡ್ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಯ ಎಂಟನೇ ಲೇನ್‌ನಲ್ಲಿ ಕಾರು ನಿಲ್ಲಿಸಿ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದು ಸಾಲದು ಎಂಬಂತೆ ಬಳಿಕ ಕಾರಿನಿಂದ ಇಳಿದು ನಡುರಸ್ತೆಯಲ್ಲೇ ಅಸಭ್ಯ ಕ್ರಿಯೆ ಮುಂದುವರಿಸಿದ್ದಾನೆ. ಇದೆಲ್ಲ ಹೆದ್ದಾರಿಯ ಸಿಸಿಟಿವಿಯಲ್ಲಿ ಸೆರೆಯಾಗಿ ವಿಡಿಯೋ ಬಹಿರಂಗವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋ ನೋಡಿ ಜನರು ಕ್ಯಾಕರಿಸಿ ಉಗಿದಿದ್ದು, ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಧಕಡ್ ಜೊತೆಗಿದ್ದ ಮಹಿಳೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.
ವಿಡಿಯೋದಲ್ಲಿ ಧಕಡ್ ಕಾಣಿಸಿಕೊಂಡಿರುವ ಬಿಳಿ ಕಾರಿನ ನೋಂದಣಿ ಸಂಖ್ಯೆ ಎಂಪಿ 14, ಸಿಸಿ 4782 ಆಗಿದ್ದು, ಇದು ಮನೋಹರ್ ಲಾಲ್ ಧಕಡ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುವುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಧಕಡ್‌ನ ಅವರ ಪತ್ನಿ ಮಂಡಸೌರ್ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯೆ. ಆದರೆ ಧಕಡ್ ಪಕ್ಷದ ನಾಯಕನಲ್ಲ. ಆತ ಆನ್‌ಲೈನ್‌ನಲ್ಲಿ ಬಿಜೆಪಿ ಸದಸ್ಯತ್ವ ಪಡೆದಿದ್ದ ಎಂದು ಪಕ್ಷ ಸ್ಪಷ್ಟಪಡಿಸಿದೆ.