ಜೈಪುರ: ಪಹಲ್ಗಾಮ್ ನಲ್ಲಿ ಪಾಕ್ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಅಪರೇಷನ್ ಸಿಂಧೂರ ಸೇನಾ ಕರ‍್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಭಾರತದ ಮೇಲೆ ಉಗ್ರರು ದಾಳಿ ಮಾಡಿದ ನಂತರ ಅನೇಕ ರೀತಿಯಲ್ಲಿ ಪಾಕ್ ಗೆ ವಿರೋಧ ವ್ಯಕ್ತವಾಗುತ್ತಲೇ ಇವೆ. ಇದೀಗ ಪಾಕ್ ಗೆ ವಿರೋಧ ವ್ಯಕ್ತ ಪಡಿಸುವಲ್ಲಿ ಸ್ವೀಟ್ ಶಾಪ್ ಗಳೂ ಕೂಡ ಸೇರ್ಪಡೆಯಾಗಿದ್ದು, ವಿನೂತನ ರೀತಿಯಲ್ಲಿ ‘ಪಾಕ್’ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಗಳು ಪ್ರಸಿದ್ಧ ‘ಮೈಸೂರು ಪಾಕ್ ಸೇರಿದಂತೆ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ.
ಇನ್ಮುಂದೆ Pak ಅಲ್ಲ Shree
ರಾಜಸ್ಥಾನದ ಜೈಪುರದ ಅಂಗಡಿ ಮಾಲೀಕರು ‘ಪಾಕ್’ ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ರ‍್ನಾಟಕದ ಮೈಸೂರಿನ ಪ್ರಸಿದ್ಧ ‘ಮೈಸೂರು ಪಾಕ್’ ಹೆಸರನ್ನೂ ಕೂಡ ಬದಲಾಯಿಸಲಾಗಿದೆ. ‘ಮೈಸೂರು ಪಾಕ್’ ಹೆಸರನ್ನು “ಮೈಸೂರು ಶ್ರೀ” ಎಂದು ಮರು ನಾಮಕರಣವನ್ನು ಮಾಡಲಾಯಿತು. ಸಿಹಿ ತಿನಿಸುಗಳಲ್ಲಿನ ‘ಪಾಕ್ ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ಪಾಕ್ ಎಂಬ ಹೆಸರು ಇರಬಾರದು ಎಂದು ವ್ಯಾಪಾರಿಗಳು ಈ ನರ‍್ಧಾರ ಕೈಗೊಂಡಿದ್ದಾರೆ. ‘ಮೋತಿ ಪಾಕ್’ ಎಂಬ ಹೆಸರನ್ನು ‘ಮೋತಿ ಶ್ರೀ’ ಎಂದು, ‘ಗೊಂಡ್ ಪಾಕ್’ ಅನ್ನು ‘ಗೊಂಡ್ ಶ್ರೀ’ ಎಂದೂ, ‘ಮೈಸೂರು ಪಾಕ್’ ಅನ್ನು “ಮೈಸೂರು ಶ್ರೀ” ಎಂದು ಮರುನಾಮಕರಣ ಮಾಡಿದ್ದೇವೆ’ ಎಂದು ಅಂಗಡಿ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.