ಪುತ್ತೂರು: ಇಂದು ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಪುತ್ತೂರು ನಗರಸಭೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.
ಗ್ರಾಮ ಚಾವಡಿಯ ಹಿಂಭಾಗದ ಕೋರ್ಟ್ ರಸ್ತೆಯ ಕಾಂಪೌಂಡ್ ಗೋಡೆ ಇದಾಗಿದ್ದು, ಈ ವೇಳೆ 3 ರಿಕ್ಷಾಗಳಿಗೆ ಹಾನಿಯಾಗಿದೆ. ಇದರಲ್ಲಿ 2 ರಿಕ್ಷಾ ತೀರಾ ಹಾನಿಗೊಳಗಾಗಿದೆ.
ಈ ಸಂದರ್ಭದಲ್ಲಿ ಯಾರೂ ಇರದೇ ಇರುವುದರಿಂದ ಜೀವಕ್ಕೆ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಪಕ್ಕದಲ್ಲಿ ನಗರಸಭೆಯ ಟ್ರಾನ್ಸ್ ‘ಫಾರ್ಮರ್ ಇದ್ದು, ಕಾಂಪೌಂಡ್ ಬಿದ್ದಾಗ ರಸ್ತೆಗೆ ವಾಲಿಕೊಂಡು ಬಿಟ್ಟಿತ್ತು. ತಕ್ಷಣ ಮೆಸ್ಕಾಮ್ ಮಾಹಿತಿ ನೀಡಿ, ಟ್ರಾನ್ಸ್ ಫಾರ್ಮರ್ ಅನ್ನು ಸರಿಪಡಿಸಲಾಯಿತು. ರಸ್ತೆಗೆ ಬಿದ್ದಿದ್ದ ಕಲ್ಲು, ಮಣ್ಣನ್ನು ಇದೀಗ ತೆರವುಗೊಳಿಸಲಾಗಿದೆ.