ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯ ಗುಣ ಇರುತ್ತದೆ. ಅದು ಗೃಹಿಣಿಯೇ ಆಗಿರಲಿ, ಮೆಕ್ಯಾನಿಕ್ಕೇ ಆಗಿರಲಿ. ಆ ಸಂಶೋಧನೆಗೊಂದು ಮೂರ್ತರೂಪ ನೀಡುವ ಅಗತ್ಯವಿದೆ. ಅದನ್ನೇ ಈ ಸಂಶೋಧನಾ ಪ್ರಬಂಧಗಳು ಮಾಡುವುದು. ಸಂಶೋಧನೆ ಎನ್ನುವುದು ಎಂದು ಮೈಸೂರಿನ ಎಸ್ ಡಿಎಂ ರಿಸರ್ಚ್ ಸೆಂಟರ್‌ನ ಪ್ರೋ. ಬಿ ವೆಂಕಟರಾಜ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸಂಶೋಧನಾಕೇಂದ್ರ ಹಾಗೂ ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ಆಯೋಜಿಸಿದ್ದ ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಪ್ರಭಾವಶಾಲಿ ಸಂಶೋಧನಾ ಬರಹ ಎಂಬ ವಿಷಯದ ಕುರಿತು ಉಪನ್ಯಾಸಕರಿಗೆ ಮಾಹಿತಿ ನೀಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, 21 ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾಗಿದ್ದವರನ್ನು ಇಂದು ವೇದಿಕೆ ಮೇಲೆ ನೋಡುತ್ತಿರುವುದು ಸಂತೋಷ ತಂದಿದೆ. ಸಂಶೋಧನಾ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯೇ ಇದಕ್ಕೆ ಕಾರಣ ಎಂದರು. ಜೊತೆಗೆ ಸಂಶೋಧನೆ ಬರಿ ಜರ್ನಲ್‌ಗಳ ಪಬ್ಲಿಕೇಷನ್‌ಗೆ ಮಾತ್ರವೇ ಸೀಮಿತವಾಗಿರಬಾರದು. ಇದರಿಂದ ಸಮಾಜದ ಮೇಲೆಯೂ ಪ್ರಭಾವ ಬೀರಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಐಕ್ಯುಎಸಿ ಸಂಯೋಜಕಿ ಡಾ. ರವಿಕಲಾ, ಶಿಕ್ಷಕರು ಉಪಸ್ಥಿತರಿದ್ದರು.
ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಡಾ. ರವಿಕಲಾ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾಜೆ. ರಾವ್ ನಿರೂಪಿಸಿದರು.