ಆನೆಗುಂದಿ ಸರಸ್ವತಿ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 15ನೇ ವರ್ಧಂತ್ಯುತ್ಸವದ ಸಮಾರಂಭದಲ್ಲಿ ಶಿಕ್ಷಣ,ಸಾಹಿತ್ಯ,ಸಂಶೋಧನೆ, ಪಂಚಶಿಲ್ಪಕ್ಷೇತ್ರದ ಕ್ರಿಯಾಶೀಲ ಸಾಧಕರಿಗೆ ಕಟಪಾಡಿ ಪಡುಕುತ್ಯಾರು ಗುರುಪೀಠದಲ್ಲಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಆನೆಗುಂದಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕೆ ಪ್ರಭಾಕರ್ ಆಚಾರ್ಯ ಕೋಟೆಕಾರು ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರೆ ಎಸ್ ಕೆ ಎಫ್ ಸಂಸ್ಥೆಯ ಜಿ ರಾಮಕೃಷ್ಣ ಆಚಾರ್, ಮೈಸೂರು ವಿ.ವಿಯ ಡಾ. ಬಿ ಶ್ರೀಕಂಠಚಾರ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ, ಮಠದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರ್ಯ ಕಂಬಾರ್, ಗಂಗಾಧರಾಚಾರ್ಯ ಉಡುಪಿ, ದಿನೇಶ್ ಆಚಾರ್ಯ ಪಡದಿದ್ರೆ, ವಿವೇಕ ಆಚಾರ್ಯ ಶಿರ್ವ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆನೆಗುಂದಿ ಶ್ರೀ ಸರಸ್ವತಿ ಪೀಠದ ಅಧೀನಕ್ಕೆ ಒಳಪಟ್ಟ ಕುತ್ಯಾರಿನ ಸೂರ್ಯ ಚೈತನ್ಯ ಹೈಸ್ಕೂಲ್ ಈ ಬಾರಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ನೂರು ಶೇಕಡ ಫಲಿತಾಂಶ ಪಡೆಡಿದ್ದು ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಸ್ವಾಮೀಜಿ ಅವರು ಸನ್ಮಾನಿಸಿದರು.