ಆಂಧ್ರ, ಕೇರಳ, ಗುಜರಾತ್‌ನಲ್ಲಿ ಪಾಸಿಟಿವ್ ಪ್ರಕರಣಗಳ ಏರಿಕೆ
ನವದೆಹಲಿ: ಕೋವಿಡ್ ಪ್ರಕರಣಗಳು ಏರಿಕೆ ಆಗುತ್ತಿದ್ದಂತೆ ಆಂಧ್ರಪ್ರದೇಶ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ.
ಜನರ ಗುಂಪು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ.
ದೇಶದಲ್ಲಿ ಈಗ ನಿಧಾನಗತಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿವೆ. ಆಂಧ್ರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ 19 ಪಾಸಿಟಿವ್ ಕೇಸ್ ದಾಖಲಾಗಿದೆ. ಗುಜರಾತ್‌ನಲ್ಲೂ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನೆರೆ ರಾಜ್ಯ ಕೇರಳ ಒಂದರಲ್ಲೇ 186 ಕೇಸ್ ಇದ್ದು 95 ಸಕ್ರಿಯ ಪ್ರಕರಣಗಳು ಇವೆ. ಕರ್ನಾಟಕದಲ್ಲಿ 33 ಕೇಸ್ ದಾಖಲಾಗಿದ್ದು ಈ ಪೈಕಿ 16 ಸಕ್ರಿಯ ಪ್ರಕರಣಗಳಾಗಿವೆ.
ಏಷ್ಯಾದ ದೇಶಗಳಲ್ಲಿ ಕೋವಿಡ್ ಮತ್ತೊಮ್ಮೆ ಹಾವಳಿಯಿಟ್ಟಿದೆ. ಸಿಂಗಾಪುರ, ಹಾಂಗಾಕಾಂಗ್ ಮತ್ತಿತರ ದೇಶಗಳಲ್ಲಿ ಸಾವಿರಗಟ್ಟಲೆ ಪ್ರಕರಣಗಳು ಪತ್ತೆಯಾದ ಬಳಿಕ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಇದರ ಬೆನ್ನಿಗೆ ಭಾರತದಲ್ಲೂ ಪ್ರಕರಣಗಳು ಏರಿಕೆಯಾಗಲಿವೆ.