ಫ್ರೀ ಪ್ಯಾಲೆಸ್ತೀನ್ ಎಂದು ಕೂಗಿ ಗುಂಡು ಹಾರಿಸಿದ ದುಷ್ಕರ್ಮಿ
ವಾಷಿಂಗ್ಟನ್ : ವಾಷಿಂಗ್ಟನ್ ಡಿಸಿಯ ಯೆಹೂದಿ ವಸ್ತು ಸಂಗ್ರಹಾಲಯದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗುತ್ತಾ ಇಬ್ಬರು ಇಸ್ರೇಲಿ ರಾಯಭಾರ ಸಿಬ್ಬಂದಿ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಗ್ರರು ಇದೀಗ ಅಮೆರಿಕಕ್ಕೂ ದಾಳಿ ಇಟ್ಟಿದ್ದು, ಜನರಲ್ಲಿ ಭೀತಿ ಹೆಚ್ಚಿದೆ. ಗುಂಡು ಹಾರಿಸಿದ ಬಳಿಕ ಒಬ್ಬ ವ್ಯಕ್ತಿ ಒಳಗಡೆ ಬಂದು ತನಗೆ ನೀರು ಮತ್ತೆ ಸುರಕ್ಷಿತ ಸ್ಥಳಬೇಕು ಎಂದು ಕೇಳಿದ್ದ. ನಂತರ ಪೊಲೀಸರು ಎಳೆದೊಯ್ಯುವಾಗ ಫ್ರೀ ಪ್ಯಾಲೆಸ್ತೀನ್ ಎಂದು ಕೂಗಿದ್ದಾನೆ. ಅಮೆರಿಕನ್ ಯಹೂದಿ ಸಮಿತಿಯ ಡಿಸಿ ಯಂಗ್ ಪ್ರೊಫೆಷನಲ್ ಬೋರ್ಡ್ ಆಯೋಜಿಸುವ ವಾರ್ಷಿಕ ಕಾರ್ಯಕ್ರಮ ಅದಾಗಿತ್ತು.
ಬುಧವಾರ ರಾತ್ರಿ ವಾಷಿಂಗ್ಟನ್ ಡಿಸಿಯ ಯೆಹೂದಿ ವಸ್ತು ಸಂಗ್ರಹಾಲಯದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ನಂತರ ಕೆಲವು ಅಪರಿಚಿತ ದುಷ್ಕರ್ಮಿಗಳು ಹೊರಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಮಾರಕ ಗುಂಡಿನ ದಾಳಿಯು ಯೆಹೂದಿಗಳ ವಿರೋಧಿ ಭಯೋತ್ಪಾದನೆಯ ದುಷ್ಕೃತ್ಯವಾಗಿದೆ. ಯಹೂದಿ ಸಮುದಾಯಕ್ಕೆ ಹಾನಿ ಮಾಡಲು ಆಲೋಚಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಇನ್ನೂ ವಿವರಗಳನ್ನು ದೃಢೀಕರಿಸಿಲ್ಲ. ಮೃತರು ಮತ್ತು ಶಂಕಿತನ ಗುರುತು ಇನ್ನೂ ತಿಳಿದುಬಂದಿಲ್ಲ ಎಂದು ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್ ಪೋಸ್ಟ್ ಮಾಡಿದ್ದಾರೆ.
ಕ್ಯಾಪಿಟಲ್ ಯೆಹೂದಿ ವಸ್ತು ಸಂಗ್ರಹಾಲಯದ ಹೊರಗೆ ಗುಂಡಿನ ದಾಳಿ ನಡೆದ ಸ್ಥಳಕ್ಕೆ ತಾನು ಮತ್ತು ಯುಎಸ್ ಅಟಾರ್ನಿ ಜೀನೈನ್ ಪಿರೋ ಆಗಮಿಸಿದ್ದೇವೆ ಎಂದು ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಪೋಸ್ಟ್ ಮಾಡಿದ್ದಾರೆ. ಬುಧವಾರ ಸಂಜೆ ವಾಷಿಂಗ್ಟನ್‌ನಲ್ಲಿರುವ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ನೌಕರರನ್ನು ಯಹೂದಿ ವಸ್ತುಸಂಗ್ರಹಾಲಯದ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ತಿಳಿಸಿದ್ದಾರೆ.
ರಾಜಧಾನಿಯಲ್ಲಿರುವ ಎಫ್‌ಬಿಐ ಕ್ಷೇತ್ರ ಕಚೇರಿಯಿಂದ ಸ್ವಲ್ಪವೇ ದೂರದಲ್ಲಿರುವ ಕ್ಯಾಪಿಟಲ್ ಯೆಹೂದಿ ವಸ್ತುಸಂಗ್ರಹಾಲಯದ ಹೊರಗೆ ಗುಂಡಿನ ದಾಳಿ ನಡೆದಿದ್ದು, ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ನೋಯೆಮ್ ಸಾವನ್ನು ದೃಢಪಡಿಸಿದ್ದಾರೆ.