ಪುತ್ತೂರು : ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ ಸುಧಾಕರ ಬನ್ನಂಜೆ ಕಥೆ- ಚಿತ್ರಕಥೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ ‘ಗಂಟ್ ಕಲ್ವೆರ್’ ಚಿತ್ರ ಮೇ 28 ರಂದು ತುಳುನಾಡನಾದ್ಯಂತ ಬಿಡುಗಡೆ ಯಾಗಲಿದೆ ಎಂದು ಸಿನೆಮಾ ನಿರ್ದೇಶಕ ಸುಧಾಕರ ಬನ್ನಂಜೆ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ, ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್ ಹಾಗೂ ಸಿನಿ ಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳ್ಳಲಿದೆ ಎಂದು ತಿಳಿಸಿದರು.
ಸಂಪೂರ್ಣ ಕಥೆ ಆಧಾರಿತ ಹಾಸ್ಯಮಯ ಸಿನೆಮಾವಾಗಿದ್ದು, ಕಥೆಗೆ ಪೂರಕವಾಗಿ ಹಾಸ್ಯ ಸನ್ನಿವೇಶಗಳಿವೆ ಎಂದು ತಿಳಿಸಿದರು.
ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಆರ್ಯನ್ ಶೆಟ್ಟಿ, ಸ್ಮಿತಾ ಸುವರ್ಣ, ಉಮೇಶ್ ಮಿಜಾರು ದಿಶಾ ಪುತ್ರನ್, ಸುಂದರ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ವಿಶೇಷ ಪಾತ್ರದಲ್ಲಿ ಅಥರ್ವ ಪ್ರಕಾಶ್ ಪ್ರಣವ್ ಹೆಗ್ಡೆ ಶ್ರೀಕಾಂತ ರೈ ಶೈಲೇಶ್ ಕೋಟ್ಯಾನ್ ನಟಿಸಿದ್ದಾರೆ.
ಸುಮಾರು 200 ಕಲಾವಿದರು ಸಿನೆಮಾದಲ್ಲಿ ನಟನೆ ಮಾಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. ವಿ ಮನೋಹರ್ ಸಂಗೀತ ಶಂಕರ್ ರವಿಕಿಶೋರ್ ಛಾಯಾಗ್ರಹಣ ಕೆ ಗಿರೀಶ್ ಕುಮಾರ್ ಸಂಕಲನ ತಮ್ಮ ಲಕ್ಷ್ಮಣ್ ಕಲೆ, ಕೌರವ ವೆಂಕಟೇಶ್ ಸಾಹಸ,ಪ್ರಶಾಂತ ಎಳ್ಳಂಪಳ್ಳಿ.ರಾಮದಾಸ ಸಸಿ ಹಿತ್ತು ಸಹ ನಿರ್ದೇಶನ ಇರುವ ಈ ಚಿತ್ರದ ಸಹನಿರ್ಮಾಪಕರು ರಾಜಾರಾಂ ಶೆಟ್ಟಿ, ಉಪ್ಪಳ, ಮಮತಾ ಎಸ್ ಬನ್ನಂಜೆ ಗಿದೀಶ್ ಎಸ್ ಪೂಜಾರಿ, ಪ್ರಾರ್ಥನ್ ಬನ್ನಂಜೆ, ಪ್ರೇರಣ್ ಬನ್ನಂಜೆ ಕೃತಿ ಆರ್ ಶೆಟ್ಟಿ, ಚೀಫ್ ಕೋ ಆರ್ಡಿನೇಟರ್ ಸುಧಾಕರ ಕುದ್ರೋಳಿ, ಸಂತೋಷ್ ಶೆಟ್ಟಿ, ಅಳಿಕ ಸಹಕರಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡದ ಪ್ರಶಾಂತ್ ಆಚಾರ್ಯ, ಆರ್ಯನ್ ಶೆಟ್ಟಿ, ಸುಧಾಕರ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.