ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ತೇಜಸ್ ಸುಬ್ಬಪ್ಪ ಕೈಕಂಬ ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್’ ನ 19ರ ವಯೋಮಾನದ ಕೆಳಗಿನ ವಿಭಾಗದ ಅಂತರ್ಜಿಲ್ಲಾ ಕ್ರಿಕೆಟ್ ಪಂದ್ಯಾಟದ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾರೆ
ಪುತ್ತೂರು ಜಿಡೆಕಲ್ಲಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಅವರ ಸುಪುತ್ರನಾದ ತೇಜಸ್ ಅವರು ಹರೀಶ್, ಕಿರಣ್ ಮತ್ತು ನವೀನ್ ಅವರ ಬಳಿ ತರಬೇತಿ ಪಡೆದಿದ್ದು ಪ್ರಸ್ತುತ ಇಲ್ಯಾಸ್ ಪಿಂಟೋ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ತೇಜಸ್ ಅವರು ತಂದೆ, ಮಾತೃಶ್ರೀ ಸವಿತಾ ಎಸ್. ಕೈಕಂಬ ಮತ್ತು ಕಿರಿಯ ಸಹೋದರ ಸುದಾನ ಶಾಲೆಯ 9ನೇ ತರಗತಿ ವಿದ್ಯಾರ್ಥಿ ವೈಭವ್ ಎಸ್. ಕೈಕಂಬ ಅವರ ಜೊತೆ ವಾಸವಾಗಿದ್ದಾರೆ.
























