ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡ ವಿಚಾರಣಾಧೀನ ಕೈದಿಗಳು
ಮಂಗಳೂರು : ಮಂಗಳೂರು ಸೆಂಟ್ರಲ್ ಜೈಲಿನಲ್ಲಿ ನಿನ್ನೆ ಕೊಲೆ ಆರೋಪಿ ಚೊಟ್ಟೆ ನೌಷದ್ ಮೇಲೆ ಹಲ್ಲೆಯಾದ ಬೆನ್ನಿಗೆ ಕೈದಿಗಳ ನಡುವೆ ಹೊಡೆದಾಟ ನಡೆದ ಘಟನೆ ಸಂಭವಿಸಿದೆ. ಸಂಜೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ವಾಗ್ವಾದ ನಡೆದಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮಾರಾಮಾರಿಯಲ್ಲಿ ಓರ್ವ ಒಬ್ಬ ಕೈದಿಗೆ ಗಾಯವಾಗಿದೆ. ಜೈಲಿನ ಅದಿಕಾರಿಗಳು ಗಲಭೆ ಕುರಿತು ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.
ಸಂಜೆ 6.40ರ ಸುಮಾರಿಗೆ ಜೈಲಿನ ಕ್ವಾರಂಟೈನ್ ಸೆಲ್ ವಿಭಾಗದಲ್ಲಿ ಮಾರಾಮಾರಿ ನಡೆದಿದೆ. ಕೆಲವು ವಿಚಾರಣಾಧೀನ ಕೈದಿಗಳು ಕಚೇರಿ ಪ್ರದೇಶದ ಬಳಿ ನಿಂತು ಬಿ ಬ್ಯಾರಕ್‌ನಲ್ಲಿದ್ದ ಕೈದಿಗಳು ತಮ್ಮತ್ತ ನೋಡಿದರು ಎಂಬ ಕಾರಣಕ್ಕಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೂಗಾಡಿದ್ದು, ಈ ಸಮಯದಲ್ಲಿ ಸಿಮೆಂಟ್ ಬ್ಲಾಕ್‌ನ್ನು ಹೊಡೆದು ಅದರ ತುಂಡುಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.
ಬಿ ಬ್ಯಾರಕ್‌ನ ಕೆಲವು ವಿಚಾರಣಾಧೀನ ಕೈದಿಗಳು ಒಳಗಿನ ಗೇಟನ್ನು ಬಲವಂತವಾಗಿ ತೆರೆದು ನ್ಯಾಯಾಂಗ ವಿಭಾಗದ ಕಚೇರಿಗೆ ಹೋಗಿ ಕೈಗಳಿಂದ ಬಾಗಿಲಿನ ಗಾಜಿನ ಫಲಕವನ್ನು ಹೊಡೆದು ಹಾನಿಯನ್ನುಂಟು ಮಾಡಿದರು. ಈ ಗಲಭೆಯ ಸಮಯದಲ್ಲಿ ಒಬ್ಬ ವಿಚಾರಣಾಧೀನ ಕೈದಿಯ ಕಾಲಿಗೆ ಗಾಯವಾಗಿರುವುದನ್ನು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮಂಗಳೂರು ಜಿಲ್ಲಾ ಸೂಪರಿಂಟೆಂಡೆಂಟ್ ಅವರು ಬರ್ಕೆ ಪೊಲೀಸ್ ರಾಣೆಯಲ್ಲಿ ದೂರು ನೀಡಿದ್ದು, ಗಲಭೆಯಲ್ಲಿ ಭಾಗಿಯಾಗಿರುವ ಕೈದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಜೈಲು ಅಧಿಕಾರಿಗಳು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಇನ್ನು ಇಂತಹ ಘಟನೆಗಳು ಮರುಕಳಿಸದಂತೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.