ಮಂಗಳೂರು: ಕೋಡಿಯಾಲ್ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇಂದು ಮಧ್ಯಾಹ್ನ ಕೈದಿಗಳ ಮಧ್ಯೆ ಮತ್ತೆ ಹೊಡೆದಾಟ ನಡೆದಿರುವ ಕುರಿತು ವರದಿಯಾಗಿದೆ.
ಅಡುಗೆ ಮಾಡುತ್ತಿದ್ದ ಕೈದಿ ಅಕ್ಷಿತ್ ಎಂಬಾತನಿಗೆ ಅಬ್ದುಲ್ ರಹ್ಮಾನ್ ಯಾನೆ ಮುನ್ನಿ ಯಾನೆ ಮುನೀರ್, ಉಮರ್ ಶಿಹಾಬ್ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರಿಂದ ಕೆಲಕಾಲ ಜೈಲಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿದು ಬಂದಿದೆ.
ಮಾಹಿತಿ ಪಡೆದ ಬರ್ಕೆ ಪೊಲೀಸರು ಜೈಲಿಗೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.