ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಸಮಿತಿ ತುಮಕೂರು ನೇತ್ರಾವತಿ ವಲಯ ಮಂಗಳೂರು ವತಿಯಿಂದ ಬೆಳ್ತಂಗಡಿಯ ಕಳಿಯ ಗ್ರಾಮದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗುತ್ತಿರುವ ಉಚಿತ ಯೋಗ ಶಿಕ್ಷಣ ತರಬೇತಿಯ ನೂರನೇ ದಿನದ ಕಾರ್ಯಕ್ರಮವು ಭಾರತ ಮಾತಾ ಪೂಜನ ಕಾರ್ಯಕ್ರಮದೊಂದಿಗೆ ಜರಗಿತು.
ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಕಳಿಯ ಮಾತನಾಡಿ, ಶಾಖೆಯು ನಿರಂತರವಾಗಿ ಮುಂದುವರಿಯಬೇಕು. ಯೋಗ ಬಂಧುಗಳು ಪ್ರತಿದಿನವು ಹಾಜರಾಗಿ ಮುಂದಕ್ಕೆ ಜರಗುವ ಪ್ರಶಿಕ್ಷಣ ತರಬೇತಿಯಲ್ಲಿ ಭಾಗವಹಿಸಿ ಬೇರೆ ಶಾಖೆಗಳ ಮೂಲಕ ಯೋಗ ತರಬೇತಿಯನ್ನು ನೀಡುವಂತಾಗಬೇಕೆಂದು ತಿಳಿಸಿದರು.
ಚಿತ್ರದುರ್ಗದಲ್ಲಿ ನಡೆದ ಯೋಗ ಪ್ರಶಿಕ್ಷಣ ತರಬೇತಿಯಲ್ಲಿ ಭಾಗವಹಿಸಿದ ಶಾಖೆಯ ಯೋಗ ಬಂಧು ಆದರ್ಶ ಅವರು ಶಿಬಿರದ ಅನುಭವವನ್ನು ಹಂಚಿಕೊಂಡರು.
ಶಿಬಿರದ ಸಂಚಾಲಕರಾದ ಕೇಶವ ಮತ್ತು ಅರುಣಾ ದಂಪತಿಯರು ಯೋಗ ಬಂಧುಗಳಿಗೆ ಅಮೃತ ಫಲಹಾರದ ವ್ಯವಸ್ಥೆಯನ್ನು ಮಾಡಿದ್ದರು. ಸತೀಶ್ ನಾಳ ಕಾರ್ಯಕ್ರಮ ನಿರೂಪಿಸಿದರು.