ಪುತ್ತೂರು: ’ರಿಸರ್ಚ್ ಇನ್ಫೋರ್ಮೇಟಿಕ್ಸ್ : ಸಂಶೊಧನಾ ವಿಧಾನಶಾಸ್ತ್ರ ಮತ್ತು ಸಂಶೋಧನಾ ಬರಹ’ ವಿಷಯದಲ್ಲಿ ಒಂದು ದಿವಸದ ಕಾರ್ಯಗಾರವ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ರಿಸರ್ಚ್‌ಡೆವಲಪ್ ಮೆಂಟ್ಟ್ ಸೆಲ್ಲ್, ಇನ್ಸ್ಟಿಟ್ಯೂಶನ್ ಇನ್ನೋವೇಸನ್ ಕೌನ್ಸಿಲ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಸಹಯೋಗದಲ್ಲಿ ಹೊಸ ಸಂಶೋಧಕರನ್ನುಉತ್ತೇಜಿಸುವ ಹಾಗೂ ಅದ್ಯಾಪಕರ ಸಂಶೋಧನಾ ಕೌಸಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ನಡೆಸಲಾಯಿತು.
ಕಾಲೇಜಿನ ಪ್ರಾಚಾರ್ಯ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ತಯಾರಾಗದೆ ಇದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲು ಸಾದ್ಯವಿಲ್ಲ. ಸಂಶೋಧನೆ ವೃತ್ತಿಪರ ಅಗತ್ಯವಷ್ಟೇ ಅಲ್ಲದೆ ವ್ಯಕ್ತಿಗತ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ಯಸ್ ಡಿ ಯಂ ಮ್ಯಾನೇಜ್ ಮೆಂಟ್ ಇನ್ಸ್ ಸ್ಟ್ಯೂಟ್ ಆಂಡ್ ಡೆವಲಪ್‌ಮೆಂಟ್ ನ ಸಹಾಯಕ ಪ್ರಾಧ್ಯಾಪಕ ಸುನಿಲ್ ಯಂ. ವಿ. , ಫೌಂಡೇಶನ್ಸ್ ಆಫ್ ರಿಸರ್ಚ್ ಡಿಸೈನ್, ಲಿಟ್ರೇಚರ್ ರಿವ್ಯೂವ್ ಆಂಡ್ ರಿಸರ್ಚ್ ಗ್ಯಾಪ್ಸ್, ಹಾಗೂ ರೈಟಿಂಗ್ ಆಂಡ್ ಡಿಸ್ ಮೈಂಟೆನಿಂಗ್ ರಿಸರ್ಚ್ ಕುರಿತು ಉಪನ್ಯಾಸ ನೀಡಿ, ಸಂಶೋಧಕರು ಸಂಶೋಧನೆಯ ವಿವಿಧ ಹಂತಗಳಲ್ಲಿ ಉಪಯೋಗಿಸಬಹುದಾದ ಉಚಿತವಾಗಿ ಲಭ್ಯವಿರುವ ಎಐ ಉಪಕರಣಗಳಾದ ಚಾಟ್ ಜಿಪಿಟಿ, ಗ್ಯಾಡ್ ಕೋಚ್, ಪ್ರೆಪ್ಲೆಕ್ಸಿಟಿ, ಜೆನ್ನಿ, ಗೀಗಲ್ ಜೆಮಿನಿ ಮತ್ತು ಮಾಂಚೆಸ್ಟರ್ ಅಕಾಡೆಮಿಕ್ ಫ್ರೆಸ್ ಬ್ಯಾಂಕ್ ಗಳನ್ನು ಪರಿಚಯಿಸಿದರು.
ಸಹಾಯಕ ಪ್ರಾಧ್ಯಾಪಕಿ ಕುಮಾರಿ ಶಿವಾನಿ ಮಲ್ಲ್ಯ ಪ್ರಾರ್ಥನೆ ಹಾಡಿದರು..ರಿಸರ್ಚ್‌ಡೆವಲಪ್ ಮೆಂಟ್ಟ್ ಸೆಲ್ಲ್ ನಿರ್ದೇಶಕ ಡಾ.ವಿನಯಚಂದ್ರ ಸ್ವಾಗತಿಸಿ, ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರಹ್ಮಾನ್ ಜಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸುರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.