ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿ ಯಲ್ಲಿ 76ನೇ ಕಾರ್ಯಕ್ರಮವಾಗಿ ಕವಿ ಶ್ರೀ ಶ್ರೀಧರ ಡಿ. ಯಸ್ ರಚಿತ ಯಕ್ಷಪ್ರಶ್ನೆ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್. ಬಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪರೀಕ್ಷಿತ್. ಯಚ್, ಅರ್ಥಧಾರಿಗಳಾಗಿ ಪಾತಾಳ ಅಂಬಾಪ್ರಸಾದ್ (ಧರ್ಮರಾಯ, ಕೃತ್ಯ )ದಿವಾಕರ ಆಚಾರ್ಯ ಗೇರುಕಟ್ಟೆ(ಶಕುನಿ, ಯಕ್ಷ), ಜಿನೇಂದ್ರ ಜೈನ್ ಬಳ್ಳಮಂಜ(ಮಂತ್ರವಾದಿ), ರವೀಂದ್ರ ದರ್ಬೆ (ಕೌರವ, ಬ್ರಾಹ್ಮಣರು ), ಮಾಸ್ಟರ್ ಸುಶಾಂತ್ (ಕರ್ಣ ಮತ್ತು ನಕುಲ), ಭಾಗವಹಿಸಿದ್ದರು.
ಶ್ರೀ ರವೀಂದ್ರ ದರ್ಬೆ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.