ಮಂಗಳೂರು : ರೈಲಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಹೃದಯಘಾತವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮೇ.17ರ ಮಧ್ಯಾಹ್ನ 3:30ರ ಸುಮಾರಿಗೆ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ನ ಜನರಲ್ ಕೋಚ್ ನಲ್ಲಿ ಕುಳಿತಿದ್ದ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಹೃದಯಾಘಾತವಾಗಿದೆ.
ತಕ್ಷಣ ಆರ್‍ಪಿಎಫ್ ಇನ್ಸ್‍ಪೆಕ್ಟರ್ ಮನೋಜ್ ಕುಮಾರ್ ಯಾದವ್ ಮತ್ತು ಸಿಬ್ಬಂದಿಗಳು ವ್ಯಕ್ತಿಗೆ ಸಿಪಿ ಆರ್ ಕೊಡಿಸಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.