ಮುಂದಿನ ಶಿಕ್ಷಣ, ಉದ್ಯೋಗಾವಕಾಶಗಳು, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಸ್ಮರ್ಧಾತ್ಮಕ ಪರೀಕ್ಷೆಗಳ ಕುರಿತು ಶೈಕ್ಷಣಿಕ ಮಾರ್ಗದರ್ಶನ, ಕಾರ್ಯಾಗಾರ | ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಸಾರಥ್ಯ

ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಕಡಬ ತಾಲೂಕಿನ ಎಲ್ಲಾ ಸಮುದಾಯದ 8ನೇ, 10ನೇ ತರಗತಿ ಮತ್ತು  ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣ, ಉದ್ಯೋಗವಕಾಶಗಳು, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃಧ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಾಗಾರ ಹೊಸಮಠ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆಯಿತು.

ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ದೇವಣ್ಣ ಗೌಡ ನೆಲ್ಲ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.



















































 
 

ರಾಷ್ರ್ಟೀಯ ಮಟ್ಟದ ತರಬೇತುದಾರರಿಂದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಮೂರು ಹಂತದ ಅಧಿವೇಶನದಲ್ಲಿ ನಡೆಯಿತು. ಮೊದಲನೇ ಅಧಿವೇಶನದಲ್ಲಿ ಡಾ.ಮಹೆಶ್ ಕೆ.ಕೆ ಪ್ರಾಧ್ಯಾಪಕರು ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯ ದೇವನಹಳ್ಳಿ ಬೆಂಗಳೂರು ಅವರು ಎಸ್.ಎಸ್. ಎಲ್. ಸಿ. ಮತ್ತು & ಪಿ.ಯು.ಸಿ ಶಿಕ್ಷಣದ ನಂತರ ಮುಂದೇನು ಮತ್ತು ಉದ್ಯೋಗವಕಾಶಗಳ ಕುರಿತಾಗಿ, ಎರಡನೇ ಅಧಿವೇಶನದಲ್ಲಿ ಡಾ .ಶಿವಕುಮಾರ್ ಹೊಸೊಳಿಕೆ, ವಿಶ್ರಾಂತ ಪ್ರಾದೇಶಿಕ ನಿರ್ದೇಶಕರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಅವರು ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃಧ್ಧಿ ವಿಷಯದ ಬಗ್ಗೆ,  ಗೋಪಾಲಕೃಷ್ಣ ಪುಯಿಲ, ವಿಶ್ರಾಂತ ಜಂಟಿ ಆಯುಕ್ತರು ಅಬಕಾರಿ ಇಲಾಖೆ ಇವರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಕುರಿತಾಗಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ, ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃಧ್ಧಿಯ ಮೂಲಕ ಸ್ವ-ಉದ್ಯಮಿಗಳಾಗುವ ಕುರಿತಾಗಿ ಮಾತನಾಡಿದರು. ಮಾಹಿತಿ ಕಾರ್ಯಗಾರದಲ್ಲಿ ಸುಮಾರು 150 ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶಿವರಾಮ್ ಗೌಡ ಏನೆಕಲ್ಲು , ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಂಜೋಡಿ, ನಿರ್ದೇಶಕರಾದ ಶ್ರೀ ಸರ್ವೋತ್ತಮ ಗೌಡ ಪಂಜೋಡಿ, ವೆಂಕಟರಮಣ ಗೌಡ ಪಾಂಗ, ಚಂದ್ರಶೇಖರ ಗೌಡ ಕೋಡಿಬೈಲು, ಆಶಾ ತಿಮ್ಮಪ್ಪ ಗೌಡ, ಗಿರೀಶ್ ಎ.ಪಿ., ಕುಶಾಲಪ್ಪ ಗೌಡ ಅನಿಲ, ನೀಲಾವತಿ ಶಿವರಾಂ, ದಯಾನಂದ ಆಲಡ್ಕ, ರಾಧಾಕೃಷ್ಣ ಗೌಡ ಕೆರ್ನಡ್ಕ, ಗಣೇಶ್ ಕೈಕುರೆ ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ , ಶ್ರೀಧರ ಗೌಡ ಗೋಳ್ತಿಮಾರು, ತಾಲೂಕು ಯುವ ಘಟಕದ ಅಧ್ಯಕ್ಷ ಪೂರ್ಣೇಶ್ ಬಲ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯ ಮಂಡೆಕರ ಉಪಸ್ಥಿತರಿದ್ದರು.

 ಒಕ್ಕಲಿಗ ಗೌಡ ಸೇವಾ ಸಂಘದ ಸಮನ್ವಯ ಅಧಿಕಾರಿ ವಾಸುದೇವ ಗೌಡ ಕೋಲ್ಪೆ ಸ್ವಾಗತಿಸಿ,  ನಿರ್ದೇಶಕ ಪ್ರವೀಣ್ ಕುಂಟ್ಯಾನ ವಂದಿಸಿದರು. ಸಂಘದ ವ್ಯವಸ್ಥಾಪಕರಾದ ಅಶೋಕ್ ಶೇಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top