ಉಪ್ಪಿನಂಗಡಿ : ಭಾರತದ ರಕ್ಷಣಾ ಬಲಕ್ಕೆ ಶಕ್ತಿ ತುಂಬುವ ಸಲುವಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ ರೂ.250000/- ಮೊತ್ತ ಚೆಕ್ ನ್ನು ನಿವೃತ್ತ ಸೈನ್ಯಾಧಿಕಾರಿ ಚಂದಪ್ಪ ಮೂಲ್ಯ ಅವರ ಮುಖಾಂತರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಂದಪ್ಪ ಮೂಲ್ಯ, ನಿವೃತ್ತ ಸೈನಿಕನಾಗಿ ದೇಶದ ರಕ್ಷಣೆಗಾಗಿ ಹೋರಾಟ ಮಾಡಲು ಸದಾ ಸಿದ್ಧ. ಭಾರತ ಜಗತ್ತಿನಲ್ಲಿ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಧುನಿಕ ಯುದ್ಧ ತಂತ್ರಜ್ಞಾನ ಬಳಕೆಯೊಂದಿಗೆ ಶತ್ರು ರಾಷ್ಟ್ರದೊಳಗೆ ನುಗ್ಗಿ ದಾಳಿ ಮಾಡುವಂತಹ ಶಕ್ತಿಶಾಲಿ ದೇಶ ಭಾರತವಾಗಿದೆ. ದೇಶದ ರಕ್ಷಣೆಯ ತುಡಿತ ಪ್ರತಿ ಭಾರತೀಯನಲ್ಲಿ ಸದಾ ಇರಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ಸುನಿಲ್ ದಡ್ಡು ಮಾತನಾಡಿ, ಪೆಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಮಾತೆಯನ್ನು ಅಮಾನುಷವಾಗಿ ಸಾಯಿಸಲಾಯಿತು. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಕೃತ್ಯ ಭಾರತದ ಮೇಲೆ ದಾಳಿ ಮಾಡಿದರೆ ಸಹಿಸಿಕೊಳ್ಳುವ ದೇಶ ಭಾರತ ಅಲ್ಲ. ಪ್ರಸ್ತತ ಕಾಲದಲ್ಲಿ ತಕ್ಕುದಾದ ಉತ್ತರವನ್ನು ಭಾರತದ ಸೈನ ನೀಡಬಲ್ಲದು. ಸಿಂದೂರು ಅಪರೇಷನ್ ಮೂಲಕ ಪಾಕಿಸ್ತಾನಕ್ಕೆ ನಮ್ಮ ದೇಶದ ಶೌರ್ಯದ ಸೇನೆ ಸರಿಯಾದ ಪ್ರತಿಕಾರವನ್ನು ಮಾಡಿತ್ತು. ಮುಂದಿನ ದಿನಗಳಲ್ಲಿ ಭಾರತದ ಬಗ್ಗೆ ದಾಳಿ ಮಾಡುವುದು ಬಿಡಿ, ಭಾರತದ ವಿರುದ್ಧ ಮಾತನಾಡಲು ಭಯಪಡುವ ರೀತಿಯಲ್ಲಿ ಉತ್ತರ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಗೌಡ ಸರೋಳಿ, ನಿರ್ದೇಶಕರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ರಾಘವ ನಾಯ್ಕ ಮಾಜಿ ಅಧ್ಯಕ್ಷರಾದ ಯಶವಂತ ಜಿ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ ಸ್ವಾಗತಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.