ಗೇರುಕಟ್ಟೆ : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯತ್ ಕಳಿಯ ಸಹಯೋಗದಲ್ಲಿ ಗೇರುಕಟ್ಟೆ ಅರಿವು ಗ್ರಂಥಾಲಯ ಕೇಂದ್ರದಲ್ಲಿ ಐದು ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತಿದೆ.
ದಿನಪತ್ರಿಕೆ ವಾಚನ, ಪುಸ್ತಕ ಓದುವುದು, ನೀತಿ ಕಥೆಗಳು, ಕವನ ರಚನೆ, ಪತ್ರ ಬರೆಯುವುದು, ಭಾಷಣಕಲೆ, ಊರಿನ ಇತಿಹಾಸ ತಿಳಿಯುವುದು ಮತ್ತು ವ್ಯಕ್ತಿತ್ವ ವಿಕಸನ ಸಂಬಂಧಿ ಚಟುವಟಿಕೆಗಳನ್ನು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಡುತ್ತಿದ್ದಾರೆ. ಶಾಲಾ ರಜಾ ದಿನಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿಸುವ ಈ ಶಿಬಿರವು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದು ವರದಾನವಾಗಿದೆ.
ಶಿಬಿರದ 4ನೇ ದಿನದಂದು ಕಳಿಯ ಗ್ರಂಥಾಲಯ ಸಮಿತಿಯ ಶಿಕ್ಷಣ ತಜ್ಞರಾದ ದಿವಾಕರ ಆಚಾರ್ಯ ಗೇರುಕಟ್ಟೆ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿದರು.
ಕಳಿಯ ಗ್ರಂಥಾಲಯದ ಮೇಲ್ವಿಚಾರಕಿ ಪ್ರಮೀಳ, ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.