ಪುತ್ತೂರು: ಯೋಗ, ಮನುಷ್ಯ ಹಾಗೂ ಪ್ರಕೃತಿಯನ್ನು ಸೇರಿಸುವ, ಒಂದಾಗಿಸುವ ಒಂದು ಸಾಧನ. ಭೌತಿಕದಿಂದ ಅಭೌತಿಕದೆಡೆಗೆ ನಡೆಸುವ ಪಯಣಕ್ಕೆ ಈ ಯೋಗವೇ ಮಾರ್ಗದರ್ಶಕ. ಯೋಗವನ್ನು ಅಭ್ಯಾಸ ಮಾಡಿದರೆ ದೇಹದ ಜಡತ್ವವು ನಿವಾರಣೆಯಾಗಿ ಸೂಕ್ಷ್ಮ ಹಾಗೂ ಕ್ರಿಯಾಶೀಲವಾದ ಮನಸ್ಸಿನೊಡನೆ ಸ್ಪಂದಿಸಲು ಸಿದ್ಧಗೊಳ್ಳುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ಶರಾವತಿ ರವಿನಾರಾಯಣ ಹೇಳಿದರು.
ಅವರು ಶುಕ್ರವಾರ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಮೂರು ದಿನಗಳ ಯೋಗ ಶಿಬಿರ ’ಮೇಧಾ ಯೋಗ’ ದಲ್ಲಿ ಮಾತನಾಡಿದರು.
ಯೋಗ ಈ ದೇಹ ಮನಸ್ಸುಗಳೆರಡೂ ಸ್ವಯಂಪ್ರಕಾಶನಾದ ಆತ್ಮನೊಡನೆ ವಿಹರಿಸಲು ಅನುವಾಗುತ್ತವೆ. ಧ್ಯಾನದ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ಅಣಿಗೊಳಿಸುತ್ತಾ ಗಟ್ಟಿಯಾದರೆ ಈ ರೋಗದ ವೈರಾಣು ದೇಹ ಸೇರಿದರೂ ಸೋತು ಹೋಗುವುದು ಖಂಡಿತ. ಸಕಾರಾತ್ಮಕ ಚಿಂತನೆಗಳಿಗೆ ಯೋಗ ಅನಿವಾರ್ಯ ಎಂದರು.
ಕಾಲೇಜಿನ ಪಿನ್ಸಿಪಾಲ್ ಪ್ರಸಾದ್ ಶ್ಯಾನಭಾಗ್, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.