ಸುಳ್ಯ: ಪುತ್ತೂರಿನಿಂದ ಮಡಿಕೇರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಬೆಟ್ಟಂಪಾಡಿಯ ಅಬ್ದುಲ್ಲಾ ಬಂಧಿತ ಆರೋಪಿ.
ಪುತ್ತೂರಿನಿಂದ ಸುಳ್ಯ ಮೂಲಕ ಮಡಿಕೇರಿಗೆ ತೆರಳುವ ಬಸ್ಸಿನಲ್ಲಿ ಮಡಿಕೇರಿಗೆ ತೆರಳಲು ಮನೆಯವರೊಂದಿಗೆ ಅಪ್ರಾಪ್ತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಕ್ಕದಲ್ಲಿ ನಿಂತಿದ್ದ ಆರೋಪಿ ಅಬ್ದುಲ್ಲಾ ಅಪ್ರಾಪ್ತೆ ಬಾಲಕಿಯ ಮೈಗೆ ಕೈ ಹಾಕಿ, ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮನೆಯವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.