ಪುತ್ತೂರು : ನಗರ ಸಭೆ ವತಿಯಿಂದ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಹಯೋಗದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರ(ರಿ.) ಪುತ್ತೂರು ಇದರ ಸಂಯೋಜಕತ್ವದಲ್ಲಿ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮ ಬೊಳುವಾರಿನ ಪ್ರಗತಿ ಆಸ್ಪತ್ರೆಯ ಅಂಗ ಸಂಸ್ಥೆಯಾದ ಪ್ರಗತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ನಡೆಯಿತು.
ಪ್ರಾಧ್ಯಪಕರಾದ ರಾಜೇಶ್ ಬೆಜ್ಜಂಗಳ ಅವರು ಸ್ವಚ್ಛತೆ ಕುರಿತಾಗಿ ಉಪನ್ಯಾಸ ನೀಡಿದರು. ಸಂಸ್ಥೆಯ ಆಡಳಿತಧಿಕಾರಿ ಪ್ರಿತಾ ಹೆಗ್ಡೆ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರ(ರಿ.) ಪುತ್ತೂರು ಇದರ ಅಧ್ಯಕ್ಷ ರಫೀಕ್ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರಿನ ಆಡಳಿತ ಮಂಡಳಿ ಸದಸ್ಯೆ ಪ್ರಮಿತಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಉಪನ್ಯಾಸಕಿ ಮಾನಸ ಸ್ವಾಗತಿಸಿ, ಸುಮಂಗಲ ಶೆಣೈ ವಂದಿಸಿದರು. ಉಪನ್ಯಾಸಕಿ ಚೈತ್ರ ಮುಖ್ಯ ಅತಿಥಿಯರನ್ನು ಸಭೆಗೆ ಪರಿಚಯಿಸಿದರು. ಉಪನ್ಯಾಸಕರಾದ ದೀಕ್ಷಾ, ಭೂಮಿಕಾ, ವೃಂದಾ ಸಹಕರಿಸಿದರು. ಉಪನ್ಯಾಸಕ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.