ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ವಿದ್ಯಾರ್ಥಿ ಪರಿಷತ್ ವತಿಯಿಂದ ತರಗತಿವಾರು ಕ್ರಿಕೆಟ್ ಪಂದ್ಯಾಟವನ್ನು ಮೇ 13 ರಂದು ನಡೆಸಲಾಯಿತು.
ಪಂದ್ಯಾಟಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ ತೆಂಗಿನ ಕಾಯಿ ಒಡೆಯುವುದರ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು. ಒಟ್ಟು 10 ತಂಡಗಳು ಭಾಗವಹಿಸಿದ್ದವು . ಪಂದ್ಯಾಟದ ತೀರ್ಪುಗಾರರಾಗಿ ಕಾರ್ತಿಕ್ ಬಿಳಿನೆಲೆ ಸಹಕರಿಸಿದರು.
ಪಂದ್ಯದಲ್ಲಿ ದ್ವಿತೀಯ ಬಿಕಾಂ (ಎ) ತಂಡವು ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಪ್ರಥಮ ಬಿಕಾಂ (ಎ) ತಂಡ ಪಡೆದುಕೊಂಡಿದೆ. ವೈಯಕ್ತಿಕ ಶ್ರೇಯಸ್ಕರ ಪ್ರಶಸ್ತಿಗಳಲ್ಲಿ, ಪಂದ್ಯ ಪುರುಷ ಪ್ರಶಸ್ತಿಯನ್ನು ಪ್ರಸಾದ್ (ದ್ವಿತೀಯ ಬಿಕಾಂ ಎ) , ಉತ್ತಮ ಬೌಲರ್ ಪ್ರಶಸ್ತಿಯನ್ನು ಸ್ನೇಹಲ್ (ಪ್ರಥಮ ಬಿಕಾಂ ಎ) ಗೆ, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಹರ್ಷಿತ್ (ದ್ವಿತೀಯ ಬಿಕಾಂ ಎ) ಗೆ ಲಭಿಸಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರವಿ ಕಕ್ಕೆ ಪದವು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ., ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಯೋಜಕಿ ಲತಾ ಬಿ.ಟಿ., ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ. ಪ್ರಸಾದ್ ಎನ್., ಸದಸ್ಯೆ ಅಶ್ವಿನಿ ಎಸ್.ಎನ್. ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.