ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ ಪಾರ್ಕಿಂಗಿಗೆ ಪೊಲೀಸ್ ಬ್ಯಾರಿಕೇಡ್ ಇಡಲಾಗಿದೆ.
ಪೊಲೀಸ್ ಬ್ಯಾರಿಕೇಡ್ ಇಟ್ಟಿರುವುದು ಇದೀಗ ಚರ್ಚೆಗೆ ದಾರಿ ಮಾಡಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಪೊಲೀಸ್ ಬ್ಯಾರಿಕೇಡ್ ಬಳಕೆಯಾಗುವುದು ಎಲ್ಲಿ? ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕ ಬಳಕೆಗಾಗಿ. ಆದರೆ ಇಲ್ಲಿ ಖಾಸಗಿ ಸಂಸ್ಥೆಯೊಂದರ ಪಾರ್ಕಿಂಗ್’ಗೆ ಬ್ಯಾರಿಕೇಡ್ ಬಳಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ಪೊಲೀಸ್ ಇಲಾಖೆಯೇ ಈ ಬ್ಯಾರಿಕೇಡ್ ಇಟ್ಟಿದೆಯೋ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೇ ಈ ಬ್ಯಾರಿಕೇಡ್ ಇಡಲಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಸ್ವತ್ತಿನ ದುರುಪಯೋಗ ಆಗುತ್ತಿದೆ ಎನ್ನುವುದು ಮಾತ್ರ ನಿಜ.
ನಗರಸಭೆ, ಪೊಲೀಸ್, ಕೆ.ಎಸ್.ಆರ್.ಟಿ.ಸಿ. ನಿರ್ಲಕ್ಷ್ಯ
ಕೆ.ಎಸ್.ಆರ್.ಟಿ.ಸಿ. ಮತ್ತು ಪಕ್ಕದ ಹೋಟೆಲ್ ಮುಂಭಾಗ ಬ್ಯಾರಿಕೇಡ್ ಇಟ್ಟಿರುವುದೇ ತಪ್ಪು. ಪ್ರಯಾಣಿಕ ವಾಹನ ರಸ್ತೆಯಲ್ಲಿ ನಿಲ್ಲಬೇಕೆ? ಕೋರ್ಟ್ ಆದೇಶದ ಪ್ರಕಾರ, ವಾಣಿಜ್ಯ ಸಂಕೀರ್ಣದ ಮುಂಭಾಗ ಬ್ಯಾರಿಕೇಡ್ ಇಟ್ಟೋ ಅಥವಾ ಇನ್ನಾವುದೋ ವಸ್ತುಗಳ ಮೂಲಕ ಪಾರ್ಕಿಂಗ್ ನಿಷೇಧಿಸುವಂತೆಯೇ ಇಲ್ಲ. ಇದರ ಬಗ್ಗೆ ನಗರಸಭೆ, ಪೊಲೀಸ್ ಹಾಗೂ ಕೆ.ಎಸ್.ಆರ್.ಟಿ.ಸಿ.ಗೆ ಮನವಿ ನೀಡಿದರೂ, ಪ್ರಯೋಜನ ಶೂನ್ಯ.
ಉಲ್ಲಾಸ್ ಪೈ, ಕೋಶಾಧಿಕಾರಿ, ಪುತ್ತೂರು ವರ್ತಕ ಸಂಘ ಹಾಗೂ ನಿಯೋಜಿತ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸಿಟಿ