ಕೊಟ್ಲಂಗಾಡ್: ಶ್ರೀ ದುರ್ಗಾಮಲ್ಲಿಕಾರ್ಜುನ (ಜಟ್ಟಿ ಮನೆ) ತರವಾಡು ಟ್ರಸ್ಟ್ ನಿಂದ ಶ್ರೀ ದುರ್ಗಾಮಲ್ಲಿಕಾರ್ಜುನ ದೇವರು, ಜಟ್ಟಿಮನೆ ತರವಾಡಿನ ಗೃಹಪ್ರವೇಶ ಹಾಗೂ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ ಕೇರಳ ರಾಜ್ಯದ ಚಿತ್ತಾರಿ ಕೊಟ್ಲಂಗಾಡ್ ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಖೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಮಲ್ಲವ ಸಾಮ್ರಾಜ್ಯದ ಗುರು ಪರಂಪರಾನುಗತ ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠಾಧ್ಯಕ್ಷರಾದ ಶಕ್ತಿ ವಿಶಿಷ್ಟಾದ್ಯ್ಯೆತ ವೇದಾಂತ ಆಚಾರ್ಯ ಕೆಳದಿ ಸಂಸ್ಥಾನ ರಾಜಗುರು ಶ್ರೀ ಷ. ಬ್ರ ಮರುಳಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ, ಚಿತ್ತಾರಿ ಬಾರಿಕ್ಕಾಡು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಜರಗಿತು.

ಕಾರ್ಯಕ್ರಮದ ಅಂಗವಾಗಿ ಮೇ 9 ಶುಕ್ರವಾರ ಸಂಜೆ 5.30 ಕ್ಕೆ ಕುತ್ತಿ ಪೂಜೆ, ಸಂಜೆ 6.30 ರಿಂದ ಅಚಾರ್ಯವರೇಣ್ಯ, ಪ್ರಾಸಾದ ಶುದ್ಧಿ, ಅಸ್ತ್ರ ಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಕಲಶಾಭಿಷೇಕ, ವಾಸ್ತುಬಲಿ, ವಾಸ್ತು ಪುಣ್ಯಾಹ, ರಾತ್ರಿ ಪೂಜೆ ನಡೆಯಿತು.

ಮೇ 10 ಶನಿವಾರ ಬೆಳಿಗ್ಗೆ 5 ರಿಂದ ಗಣಪತಿ ಹೋಮ, ನಂತರ ಬಿಂಬ ಶುದ್ಧಿ, ಕಳಶ ಪೂಜೆ, ಕಲಶಾಭಿಷೇಕ, ಅನುಜ್ಞಾ ಕಲಶ ಪೂಜೆ, ಸಂಹಾರ ತತ್ವ ಹೋಮ, ಕಳಶ ಪೂಜೆ, ಕಲಶಾಭಿಷೇಕ, ಜೀವ ಕಳಶ ಪೂಜೆ, ಜೀಪೋದ್ವಾಸನ, ಶಯ್ಯಾ ಪೂಜೆ, ವಿದ್ವೇಶ್ವರ ಕಲಶ ಪೂಜೆ, ನಿದ್ರಾ ಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಜೀವ ಕಳಶ ಪೂಜೆ, ಜೀವ ಕಳಶ ಶಯ್ಯೆಗೆ ಅವಾಹನೆ ನಡೆದು ಅನ್ನಪ್ರಸಾದ ವಿತರಣೆ ನಡೆಯಿತು. ಸಂಜೆ 5 ಕ್ಕೆ ಸಭಾ ಕಾರ್ಯಕ್ರಮ ಜರಗಿತು. ಸಂಜೆ 6 ರಿಂದ ಆಧಿವಾಸ ಹೋಮ, ಧ್ಯಾನಾದಿವಾಸ, ಬ್ರಹ್ಮ ಕಲಶ ಪೂಜೆ, ಪರಿಕಲಶ ಪೂಜೆ, ಮಂಡಲ ಪೂಜೆ, ಕಲಶಾಧಿವಾಸಂ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಮೇ 11 ಭಾನುವಾರ ಬೆಳಿಗ್ಗೆ 7.15 ರಿಂದ 8.30 ರ ಶುಭ ಮುಹೂರ್ತದಲ್ಲಿ ಶ್ರೀ ದುರ್ಗಾಮಲ್ಲಿಕಾರ್ಜುನ ದೇವರು, ಜಟ್ಟಿಮನೆ ತರವಾಡು ಹಾಗೂ ಗುಳಿಗ ದೈವದ ಪ್ರತಿಷ್ಠೆ ನಂತರ ಕಂಭೇಶ, ನಿದ್ರಾಕಲಶಾಭಿಷೇಕ, ಪರಿಕಲಶಾಷೇಕ, ಬ್ರಹ್ಮ ಕಲಶಾಭಿಷೇಕ ನಡೆದು ಬಳಿಕ ಮಧ್ಯಾಹ್ನ 12.30 ರಿಂದ ಗುಳಿಗ ದೈವದ ನೇಮೋತ್ಸವ ಜರಗಿತು. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಿತು. ಸಂಜೆ 6.30 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭದಲ್ಲಿ ಶ್ರೀ ದುರ್ಗಾಮಲ್ಲಿಕಾರ್ಜುನ (ಜಟ್ಟಿ ಮನೆ) ತರವಾಡು ಟ್ರಸ್ಟ್ ನ ಅಧ್ಯಕ್ಷರು, ಸರ್ವ ಸದಸ್ಯರು, ಕುಟುಂಬಸ್ಥರು ಹಾಗೂ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.