ಪುತ್ತೂರು: ಎಸ್ ಎಸ್ ಎಲ್ ಸಿ ಪ್ರತೀಯೊಬ್ಬ ವಿದ್ಯಾರ್ಥಿಯ ಮೊದಲ ನಿರ್ಣಾಯ ಘಟ್ಟವಾಗಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕವು ವಿದ್ಯಾರ್ಥಿಯನ್ನು ಉನ್ನತದತ್ತ ಕೊಂಡೊಯ್ಯುತ್ತದೆ. ಬಳಿಕ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿ ಪದವಿ ಪರಿಕ್ಷೆ ಮುಗಿಸುವುದರ ಒಳಗಾಗಿ ವಿದ್ಯಾರ್ಥಿಗಳು ಐಎಎಸ್, ಐಪಿಎಇಸ್ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಸೋಮವಾರ ಶಾಸಕರ ಭವನದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರತೀಯೊಬ್ಬ ವಿದ್ಯಾರ್ಥಿಯೂ ತಾನು ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಬೇಕು ಎಂಬ ಕನಸು ಕಾಣಬೇಕು, ಕನಸು ಅಥವಾ ದೃಡ ನಿರ್ಧಾರ ಇಲ್ಲದೆ ಯಾವುದನ್ನೂ ಮಾಡಲು ಸಾಧ್ಯವಿಲ್ಲ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರಿಕ್ಷೆಯಲ್ಲಿ ಪುತ್ತೂರಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಜಿಲ್ಲೆಯಲ್ಲೇ ಪುತ್ತೂರು ತಾಲೂಕು ಪ್ರಥಮ ಸ್ಥಾನ ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ ಅವರು, ಪಿಯುಸಿ ಪರಿಕ್ಷೆ ಮುಗಿದ ತಕ್ಷಣವೇ ಐಎಎಸ್ ಮತ್ತು ಐಪಿಎಸ್ ಪರಿಕ್ಷೆ ಬರೆಯಲು ಸಿದ್ದತೆ ಮಾಡಬೇಕು. ಮಕ್ಕಳ ಕಲಿಕೆಗೆ ಸೂಕ್ತ ವಾತಾವರಣವನ್ನು ಕಲ್ಪಿಸಬೆಕಾದ್ದು ಪೋಷಕರ ಕರ್ತವ್ಯವಾಗಿದ ಎಂದು ಹೇಳಿದರು.
ಸನ್ಮಾನ : ಎಸ್ಎಸ್ಎಲ್ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಉಪ್ಪಿನಂಗಡಿ ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಲೋಹಿತ್ ವೆಂಕಪ್ಪ ಮನಕಟ್ಟಿ, ಮಣಿಲ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶೈನಾಲಿಷಾಮೊಂತೆರೋ, ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯ ಆವಂತಿ ಶರ್ಮ, ಶಾಂತಿನಗರ ಸರಕಾರಿ ಪ್ರೌಢ ಶಾಲೆಯ ಟಿ ಪೂಜಾ, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಸಾಲೆಯ ವಿದ್ಯಾರ್ಥಿಗಳಾದ ಚಿನ್ಮಯ್ ಎಸ್, ಪ್ರಜ್ಞಾ ನಿಡ್ವಣ್ಣಾಯ, ಮಾನ್ಯ, ಶ್ರೀಜಿತ್, ಸಮನ್ವಿತಾ, ಶ್ರೀರಾಮಕೃಷ್ಣ ಪ್ರೌಡ ಶಾಲೆಯ ವಿದ್ಯಾರ್ಥಿಗಳಾದ ಗಗನ್, ನಿಶ್ಮಿತಾ, ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ವಿದ್ಯಾರ್ಥಿ ನಿಹಾಲ್ ಎಚ್ ಶೆಟ್ಟಿ ಅವರನ್ನು ಶಾಸಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಸ್ವಾಗತಿಸಿದರು. ಕಚೇರಿ ಸಿಬಂದಿಗಳಾದ ಜುನೈದ್ ಬಡಗನ್ನೂರು, ರಚನಾ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಪಿಎ ರಂಜಿತ್ ವಂದಿಸಿದರು.