ಪುತ್ತೂರು: ನಗರಸಭೆ, ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್ ಸಹಯೋಗದಲ್ಲಿ ಸಂಸಾರ ಜೋಡುಮಾರ್ಗ ತಂಡದಿಂದ ಘನತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿಯ ಬೀದಿ ನಾಟಕವನ್ನು ಪುತ್ತೂರು ನಗರದ ವಿವಿಧೆಡೆಗಳಲ್ಲಿ ಆಯೋಜಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಕಿಲ್ಲೆ ಮೈದಾನದ ಸಂತೆಯ ಮಧ್ಯೆ ವ್ಯಾಪಾರಿಗಳು ಹಾಗೂ ಗ್ರಾಹಕರ ಗಮನ ಸೆಳೆಯಲಾಯಿತು.
ಮೌನೇಶ್ ವಿಶ್ವಕರ್ಮ ಅವರ ನೇತೃತ್ವದಲ್ಲಿ ತ್ಯಾಜ್ಯಗಳ ಬೇರ್ಪಡಿಸುವಿಕೆ, ಸಮರ್ಪಕ ವಿಲೇವಾರಿ, ವ್ಯಾಪಕ ಪ್ಲಾಸ್ಟಿಕ್ ಬಳಕೆಯಿಂದ ಸಮಾಜದಲ್ಲಿ ಉಂಟಾಗುತ್ತಿರುವ ಸಮಸ್ಯೆ, ಸಂಕಷ್ಟಗಳ ಕುರಿತು ಗಮನ ಸೆಳೆಯುವ ನಾಟಕವನ್ನು ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್‌ನ ಡಾ. ರಾಜೇಶ್ ಬೆಜ್ಜಂಗಳ, ನಗರಸಭಾ ಸದಸ್ಯ ಯೂಸುಫ್, ಇಂಜಿನಿಯರ್ ದುರ್ಗಾ ಪ್ರಸಾದ್, ರಾಮಚಂದ್ರ, ಶ್ವೇತಾ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.