ಪುತ್ತೂರು: ಸಾವಿರ ವರ್ಷ ಇತಿಹಾಸವಿರುವ ಶ್ರೀ ಮಹಾಕಾಳಿ ದೇವಸ್ಥಾನದ ಷಡಾಧಾರ ಹಾಗೂ ನಿಧಿಶುಂಭ ಪ್ರತಿಷ್ಠೆ ಭಾನುವಾರ ಬೆಳಿಗ್ಗೆ ನಡೆಯಿತು.
ಷಡಾಧಾರ ಹಾಗೂ ನಿಧಿಶುಂಭ ಪ್ರತಿಷ್ಠೆ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಬನ್ನಂಜೆ ರಾಮದಾಸ್ ಭಟ್ ಅವರ ಆಚಾರ್ಯತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.
ಶನಿವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯಲ್ಲಿ ಆಗಮಿಸಿದ ನಿಧಿಕುಂಭವನ್ನು ಭಾನುವಾರ ಪ್ರತಿಷ್ಠಾಪಿಸಲಾಯಿತು.
ಬಂಗರಸರ ಆಡಳಿತ ಕಾಲದಲ್ಲಿ ಆರಾಧ್ಯ ದೇವಿಯಾಗಿದ್ದ ಈ ಸಾನಿಧ್ಯ ಮುಂದೆ ಸಾರಸ್ವತ ಬ್ರಾಹ್ಮಣ ಮನೆತನದ ರಾಧಾಬಾಯಿ ಅವರ ಮನೆಯಲ್ಲಿ ಆರಾಧನೆ ಪಡೆದುಕೊಂಡಿತು. ಇದೀಗ ಪುತ್ತೂರು ಕಿಲ್ಲೆ ಮೈದಾನದ ಮುಂಭಾಗದ ಪುತ್ತೂರು ಸೆಂಟರ್ ಹಿಂಭಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ.