ಪಹಾಲ್ಗಮ್ ದಾಳಿ ಬಳಿಕ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಪ್ರತಿಕಾರವನ್ನು ತೀರಿಸಲು ದಾಳಿ ನಡೆಸಿತು. ಭಾರತ – ಪಾಕಿಸ್ತಾನ ನಡುವೆ ತೀವ್ರ ಸಂಧಿಘ್ನ ಉಂಟಾಗಿತ್ತು. ಈ ಹಿನ್ನಲೆ ಕಳೆದ 2 ದಿನಗಳಿಂದ ಹಗಲು ರಾತ್ರಿ ಎನ್ನದೆ ಭಾರತ ಮತ್ತು ಪಾಕಿಸ್ತಾನದ ನಡುವೆ ವೈಮಾನಿಕ ದಾಳಿ, ಶೆಲ್ ದಾಳಿ, ಗುಂಡಿನ ದಾಳಿ ನಡೆದಿತ್ತು.
ಈ ದಾಳಿಯ ಮದ್ಯೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ಒಪ್ಪಿಸಿದಾದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಎರಡು ದೇಶಗಳ ನಡುವಿನ ಒಪ್ಪಂದವನ್ನು ಮುರಿದಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ತಿ ತಿಳಿಸಿದ್ದಾರೆ.
ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ನಮ್ಮ ಸೇನೆಯು ತಕ್ಕ ರೀತಿಯ ಪ್ರತ್ಯುತ್ತರ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಪಾಕಿಸ್ತಾನದ ಗಮನಕ್ಕೂ ತರಲಾಗಿದೆ. ಅಲ್ಲದೆ, ಎಲ್ಲ ಪಡೆಗಳು ಸನ್ನದ್ಧವಾಗಿರುವಂತೆ ಸೂಚಿಸಿದ್ದು, ಯಾವುದೇ ದಾಳಿ ನಡೆದರೂ ತೀವ್ರ ಸ್ವರೂಪದ ಪ್ರತಿ ದಾಳಿ ನಡೆಸುವಂತೆಯೂ ಸೇನೆಗೆ ಸೂಚಿಸಲಾಗಿದೆ ಎಂದರು.