ಮಂಗಳೂರು/ನವದೆಹಲಿ: ಅಪರೇಷನ್ ಸಿಂಧೂರ್ ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ(ಐಎಎಫ್) ಮಾಹಿತಿ ನೀಡಿದೆ.
ಪಹಾಲ್ಗಮ್ ಯುದ್ಧದ ಬಳಿಕ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಎಂಬ ಶೀರ್ಷಿಕೆಯಡಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ದಾಳಿಯ ನಂತರ ಭಾರತ – ಪಾಕ್ ನಡುವೆ ಕದನ ವಿರಾಮಕ್ಕೆ ಒಪ್ಪಂದ ಮಾಡಲಾಯಿತು. ಕದನ ವಿರಾಮವನ್ನು ಉಲ್ಲಂಘನೆ ಮಾಡಿ ಯುದ್ಧ ಮಾಡಿದೆ ಎನ್ನಲಾಗಿದೆ.
ಇದೀಗ ಮತ್ತೇ ಆಪರೇಷನ್ ಸಿಂಧೂರ ಕಾರ್ಯಚರಣೆ ಮುಂದುವರೆದಿದೆ. ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ರೀತಿಯ ಉಹಾಪೋಹಾಗಳಿಗೆ ಕಿವಿಗೋಡದೆ, ಅಸ್ಪಷ್ಟ ಮಾಹಿತಿಯನ್ನು ರವಾನೆ ಮಾಡುವುದನ್ನು ತಪ್ಪಿಸಿ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಐಎಎಫ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಅಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ಮುಂದುವರೆದಿದೆ ಎಂದು ಹೇಳಿದ್ದು ಪಾಕಿಸ್ತಾನದವರ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.