ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಭಾರತೀಯ ಬಿಎಸ್ಎಫ್ ಯೋಧ ಹುತಾತ್ಮ, 7 ಸೈನಿಕರಿಗೆ ಗಾಯ

ಭಾರತ – ಪಾಕಿಸ್ತಾನ ಮಧ್ಯೆ ಇದ್ದ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿ ಭಾರತದ ಮೇಲೆ ಜಮ್ಮುವಿನಲ್ಲಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಓರ್ವ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದು, 7 ಮಂದಿ ಸೈನಿಕರಿಗೆ ಗಾಯಗಳಾಗಿವೆ ತಿಳಿದು ಬಂದಿದೆ.

ಜಮ್ಮುವಿನ ಆರ್‌ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್‌ಎಫ್ ಎಸ್‌ಐ ಎಂಡಿ ಮೊಹಮ್ಮದ್ ಇಮ್ಮಿಯಾಜ್ ಹುತಾತ್ಮರಾಗಿದ್ದಾರೆ. ಹಾಗೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ.

ನಿಯಮ ಉಲ್ಲಂಘನೆ ಮಾಡಿ ಕದನ ಆರಂಭಿಸಿದ ಪಾಕಿಸ್ತಾನ ನಂಬಿಕೆಗೆ ಅನರ್ಹ ಎಂಬುವುದನ್ನು ಮತ್ತೇ ಸಾಬೀತಾಗಿದೆ ಎನ್ನಲಾಗಿದೆ.

















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top